ಕರ್ನಾಟಕ

karnataka

ETV Bharat / state

ಧರ್ಮೇಗೌಡರನ್ನು ನೆನೆದು ಭಾವುಕರಾದ ಮಾಜಿ ಶಾಸಕ ಎನ್ ಹೆಚ್ ಕೋನರೆಡ್ಡಿ! - ಹುಬ್ಬಳ್ಳಿ ಲೇಟೆಸ್ಟ್ ನ್ಯೂಸ್

ಅವರು ಎಲ್ಲರ ಜೊತೆಯೂ ಆತ್ಮೀಯರಾಗಿದ್ದರು. ವಿಧಾನ ಪರಿಷತ್ತಿನಲ್ಲಿ ನಡೆದ ವಿಚಾರ ಹೇಳಿಕೊಂಡು ನೊಂದಿದ್ದರು, ಆ ವಿಚಾರಕ್ಕೆ ಅವರು ಇಂತಹ ನಿರ್ಧಾರ ಕೈಗೊಂಡಿರಬಹುದು. ರಾಜಕೀಯದಲ್ಲಿ ಇಂತಹ ಘಟನೆ ನಡೆಯಬಾರದು..

n-h-konareddy-condolence-to-death-of-s-l-dharmegowda
ಮೌನಾಚರಣೆ

By

Published : Dec 29, 2020, 2:18 PM IST

ಹುಬ್ಬಳ್ಳಿ :ವಿಧಾನಪರಿಷತ್ ಉಪ ಸಭಾಪತಿ ಎಸ್ ಎಲ್ ಧರ್ಮೇಗೌಡರ ನಿಧನ ಹಿನ್ನೆಲೆ ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ಜೆಡಿಎಸ್ ನಾಯಕರು ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು. ಧರ್ಮೇಗೌಡರ ಆತ್ಮಕ್ಕೆ ಶಾಂತಿ ಸಿಗಲೆಂದು ಮೌನಾಚರಣೆ ಮಾಡಿದರು.

ಬಳಿಕ ಮಾತನಾಡಿದ ಮಾಜಿ ಶಾಸಕ ಎನ್ ಹೆಚ್ ಕೋನರೆಡ್ಡಿ, ಎಸ್ ಎಲ್ ಧರ್ಮೇಗೌಡರ ನಿಧನ ಸುದ್ದಿ ನಂಬಲಾಗುತ್ತಿಲ್ಲ. ಶಾಸಕರಾಗಿ, ಉಪಸಭಾಪತಿಗಳಾಗಿ ಜನಮನ್ನಣೆ ಗಳಿಸಿದ್ದ ಅವರ ದುರಂತ ಅಂತ್ಯ ಅತ್ಯಂತ ದುಃಖ ತಂದಿದೆ ಎಂದರು.

ಧರ್ಮೇಗೌಡರನ್ನು ನೆನೆದು ಭಾವುಕರಾದ ಮಾಜಿ ಶಾಸಕ ಎನ್ ಹೆಚ್ ಕೋನರೆಡ್ಡಿ!

ಅವರು ಎಲ್ಲರ ಜೊತೆಯೂ ಆತ್ಮೀಯರಾಗಿದ್ದರು. ವಿಧಾನ ಪರಿಷತ್ತಿನಲ್ಲಿ ನಡೆದ ವಿಚಾರ ಹೇಳಿಕೊಂಡು ನೊಂದಿದ್ದರು, ಆ ವಿಚಾರಕ್ಕೆ ಅವರು ಇಂತಹ ನಿರ್ಧಾರ ಕೈಗೊಂಡಿರಬಹುದು. ರಾಜಕೀಯದಲ್ಲಿ ಇಂತಹ ಘಟನೆ ನಡೆಯಬಾರದು. ಇವರ ಸಾವು ರಾಜಕೀಯ ಕಗ್ಗೊಲೆ ಎಂದು ಆರೋಪಿಸಿದರು. ಧರ್ಮಗೌಡರ ಪತ್ನಿಯನ್ನೇ ಪಕ್ಷಾತೀತವಾಗಿ ಎಂಎಲ್‌ಸಿ ಆಗಿ ಮಾಡಬೇಕು ಅಂತಾ ಇದೇ ವೇಳೆ ಕೋನರೆಡ್ಡಿ ಆಗ್ರಹಿಸಿದರು.

ಈ ಸುದ್ದಿಯನ್ನೂ ಓದಿ:ಡೆತ್‌ನೋಟ್‌ನಲ್ಲಿ ಆಸ್ತಿ ಹಂಚಿಕೆ ಕುರಿತು ಬರೆದಿದ್ದಾರೆ, ಅವರ ಕುಟುಂಬಕ್ಕೆ ಸಾಂತ್ವನ ಹೇಳುವೆ- ಸಿಎಂ ಬಿಎಸ್‌ವೈ

ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದ್ದು ಬಹಳ ನೋವು ತಂದಿದೆ ಎಂದು ಧರ್ಮೇಗೌಡರನ್ನು ನೆನೆದು ಕೋನರೆಡ್ಡಿ ಅವರು ಭಾವುಕರಾದರು.

ABOUT THE AUTHOR

...view details