ಧಾರವಾಡ:ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ಸಿಕ್ಕಿರುವುದುನ್ನು ಶ್ರೀ ರಾಮ ಸೇನೆ ಸ್ವಾಗತಿಸಿದೆ. 501 ಬಾರಿ ರಾಮ ನಾಮ ಜಪ ಮಾಡುವ ಮೂಲಕ ಸಮಸ್ತ ಹಿಂದೂ ಸಮಾಜದ ಪರವಾಗಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮಂದಿರ ನಿರ್ಮಾಣ ಕಾರ್ಯಕ್ಕೆ ಬೆಂಬಲ ನೀಡಿದ್ದಾರೆ.
ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಸ್ವಾಗತಿಸಿದ ಪ್ರಮೋದ್ ಮುತಾಲಿಕ್ - Ayodhya Mandir
ಅಯೋಧ್ಯೆಯ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ಸಿಕ್ಕಿರುವುದನ್ನು ಶ್ರೀರಾಮ ಸೇನೆ ಸ್ವಾಗತಿಸಿದ್ದು, ಇದು ಹಿಂದೂಗಳ ಹೋರಾಟದ ಫಲ ಎಂದಿದ್ದಾರೆ.
ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಆರಂಭ: ಮುತಾಲಿಕ್ ಸ್ವಾಗತ
ಧಾರವಾಡದ ತಮ್ಮ ನಿವಾಸದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ವಿವಾದಿತ ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಪ್ರಾರಂಭವಾಗಿರುವುದು ಹಿಂದೂಗಳ ಹೋರಾಟದ ಫಲ ಎಂದರು.
ರಾಮಮಂದಿರ ನಿರ್ಮಾಣ ಕಾರ್ಯ ಆರಂಭ ಆಗಿದೆ ಈ ಕಾರ್ಯಕ್ಕೆ ಶ್ರೀ ರಾಮಸೇನೆ ಸದಾ ಬೆಂಬಲವಾಗಿ ನಿಲ್ಲುತ್ತದೆ ಎಂದೂ ಹೇಳಿದರು.