ಕರ್ನಾಟಕ

karnataka

ETV Bharat / state

ಸಿಎಎ ಪರ ಬಹಿರಂಗ ಸಭೆ: ಇಂದಿರಾ ಗಾಂಧಿಯನ್ನು ಹಾಡಿ ಹೊಗಳಿದ ಮುತಾಲಿಕ್ - ಬಾಂಗ್ಲಾ ಮತ್ತು ಪಾಕಿಸ್ತಾನದಿಂದ ಬಂದ ಹಿಂದೂಗಳಿಗೆ ಮೊದಲು ಪೌರತ್ವ

ಮೊದಲ ಬಾರಿಗೆ ಬಹಿರಂಗವಾಗಿ ಇಂದಿರಾಗಾಂಧಿಯನ್ನು ಶ್ರೀರಾಮಸೇನಾ ಮುಖಂಡ ಪ್ರಮೋದ್ ಮುತಾಲಿಕ್ ಹಾಡಿ ಹೊಗಳಿದ್ದಾರೆ.

KN_DWD_5_caa_para_open_meeting_avb_KA10001
ಸಿಎಎ ಪರ ಬಹಿರಂಗ ಸಭೆ: ಇಂದಿರಾ ಗಾಂಧಿಯನ್ನು ಹಾಡಿ ಹೊಗಳಿದ ಮುತಾಲಿಕ್

By

Published : Feb 9, 2020, 6:52 AM IST

ಧಾರವಾಡ:ಕಡಪಾ ಮೈದಾನದಲ್ಲಿ ದೇಶಭಕ್ತ ವೇದಿಕೆಯಿಂದ ಜರುಗಿದ ಸಿಎಎ ಬೆಂಬಲಿಸಿ ಸಾರ್ವಜನಿಕ ಸಬೆಯಲ್ಲಿ ಪ್ರಮೋದ್ ಮುತಾಲಿಕ್ ಇಂದಿರಾ ಗಾಂಧಿ ಅವರನ್ನು ಹಾಡಿ ಹೊಗಳಿದ್ದಾರೆ.

ಸಿಎಎ ಪರ ಬಹಿರಂಗ ಸಭೆ: ಇಂದಿರಾ ಗಾಂಧಿಯನ್ನು ಹಾಡಿ ಹೊಗಳಿದ ಮುತಾಲಿಕ್
ಬಾಂಗ್ಲಾ ಮತ್ತು ಪಾಕಿಸ್ತಾನದಿಂದ ಬಂದ ಹಿಂದೂಗಳಿಗೆ ಮೊದಲು ಪೌರತ್ವ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಿದ ಮಹಾ ತಾಯಿ ಇಂದಿರಾಗಾಂದಿ ಎಂದು ಪ್ರಮೋದ ಮುತಾಲಿಕ್ ಹೊಗಳಿದ್ದಾರೆ.
ಕಾಂಗ್ರೆಸ್ ಅಧಿಕಾರದಿಂದ ಹೊರಗೆ ಬಂದ ಮೇಲೆ ನೀರಿನಿಂದ ಬಂದ ಮೀನಿನಂತೆ ಒದ್ದಾಡುತ್ತಿದ್ದಾರೆ. ಎಪ್ಪತ್ತು ವರ್ಷ ದೇಶವನ್ನು ಹಾಳು ಮಾಡಿದ್ದಾರೆ. ಈಗ ದಿಕ್ಕು ತಪ್ಪಿಸುವ ಪ್ರಯತ್ನ ಮಾಡ್ತಿದಾರೆ. ಅದು ಆಗಲ್ಲ. ಅದಕ್ಕಾಗಿ ಈ ದೇಶದ ಮುಗ್ದ ಮಸ್ಲಿಂ ಮತ್ತು ದಲಿತರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಅದಕ್ಕೆ ಹಲವಾರು ಮುಖಂಡರು ನೇತೃತ್ವ ತೆಗೆದುಕೊಳ್ಳುತ್ತಿದ್ದಾರೆ. ಇವರಿಗೆ ಹಿಂಬಾಲಕರೇ ಇಲ್ಲ. ಅದಕ್ಕಾಗಿ ಮುಸ್ಲಿಂರನ್ನು ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರು ಯಾರು ವಿರೋಧ ಮಾಡುತ್ತಿಲ್ಲ. ಕೇವಲ ನಾಯಕರು ಮಾತ್ರ ಇದೆಲ್ಲ ಮಾಡುತ್ತಿದ್ದಾರೆ. ಕಾರ್ಯಕರ್ತರಿಗೆ ಎಲ್ಲವೂ ಗೊತ್ತಿದೆ. ಪಾಕಿಸ್ತಾನದಲ್ಲಿ ತೊಂದರೆ ಆದ ಹಿಂದುಗಳಿಗೆ ಪೌರತ್ವ ಕೊಡುವುದು ನಮ್ಮ ಧರ್ಮ ಎಂದು ಹಿಂದೆಯೇ ಗಾಂಧಿ ಮತ್ತು ನೆಹರೂ ಕೂಡಾ ಹೇಳಿದ್ದರು. ಹಿಂದೆ ಒಪ್ಪಂದ ಕೂಡಾ ಆಗಿತ್ತು, ಅದು ಪೌರತ್ವ ತಿದ್ದುಪಡಿ ಕಾಯಿದೆಗಾಗಿಯೇ ಇಂದಿರಾ ಗಾಂದಿ ಕೂಡಾ ಹಿಂದೆ ಬಾಂಗ್ಲಾ ಮತ್ತು ಪಾಕಿಸ್ತಾನದಿಂದ ಬಂದ ಹಿಂದೂಗಳಿಗೆ ಆಶ್ರಯ ನೀಡಿದ್ದ ಮಹಾತಾಯಿ ಎಂದು ಹೇಳಿದ್ದಾರೆ.

ದೌರ್ಜನ್ಯಕ್ಕೊಳಗಾದ ಹಲವಾರು ಜನರಿಗೆ ಸೌಲಭ್ಯಗಳನ್ನು ಕೊಟ್ಟದ್ದು ಇಂದಿರಾಗಾಂಧಿ, ಅದನ್ನು ಎಲ್ಲರೂ ಒಪ್ಪಿಕೊಂಡಿದ್ದರು. ಇದನ್ನು ಪ.ಬಂ. ಸಿಎಂ ಮಮತಾ ಕೂಡಾ ಒಪ್ಪಿಕೊಂಡಿದ್ದರು. ಹಿಂದೆ ಬಾಂಗ್ಲಾದಿಂದ ಬಂದ ಹಿಂದೂಗಳಿಗೆ ಯಾವಾಗ ಪೌರತ್ವ ನೀಡುತ್ತಿರಿ ಎಂದು ದ್ವನಿ ಕೂಡಾ ಎತ್ತಿದ್ದರು. ಅವತ್ತು ಒಪ್ಪಿಗೆ ಕೊಟ್ಟವರು ಇವತ್ತು ವಿರೋಧ ಮಾಡಲು ಒಂದೇ ಕಾರಣ ಅದು ಅಧಿಕಾರ, ಅವರಿಗೆ ದೇಶದ ಬಗ್ಗೆ ಕಾಳಜಿ ಇಲ್ಲ, ಕೇವಲ ಖುರ್ಚಿಯ ಚಿಂತೆ ಅಷ್ಟೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ಬರುದ್ದಿನ್ ಮತ್ತು ಅಸಾದುದ್ದಿನ್ ಓವೈಸಿ ಇಬ್ಬರು ಇರೋದೆ ದೇಶದಲ್ಲಿ ಬೆಂಕಿ ಹಚ್ಚಲು. ಹಿಂದೆ ದಲಿತರನ್ನು ಪಾಕಿಸ್ತಾನಕ್ಕೆ ಸೇರಿಸುವ ಕೆಲಸವನ್ನು ಮಾಡಿದ್ರು. ಸಫಲ ಕೂಡಾ ಆದ್ರು. ನಂತರ ಅವರಿಗೆಲ್ಲ ತಿಳಿಯಿತು. ಇದೊಂದು ಇಸ್ಲಾಮಿಕ್ ದೇಶ. ನಮಗೆಲ್ಲ ಇಲ್ಲಿ ಜಾಗ ಇಲ್ಲ ನಮ್ಮ ಮೇಲೆ ದೌರ್ಜನ್ಯ ನಡಿತಾಯಿದೆ ಎಂದು ಈ ಕಾಯಿದೆಯಿಂದ ಭಾರತೀಯ ಮುಸ್ಲಿಂರಿಗೆ ಯಾವುದೇ ತೊಂದರೆಯಿಲ್ಲ. ನೀವೆಲ್ಲ ಭಾರತ ಮಾತೆಯ ಮಕ್ಕಳು ಎಂದು ಎರಡನೆ ಸರ್ದಾರ ವಲ್ಲಭಬಾಯಿ ಪಟೇಲ್ ಅಮಿತ್ ಷಾ ಮತ್ತು ಮೋದಿ ಹಲವು ಬಾರಿ ಹೇಳಿದ್ದಾರೆ ಎಂದರು.


ABOUT THE AUTHOR

...view details