ಧಾರವಾಡ :ಬಕ್ರೀದ್ ಹಬ್ಬದಂದು ಗೋಹತ್ಯೆ ನಿಲ್ಲಿಸುವಂತೆ ಆಗ್ರಹಿಸಿ ಶ್ರೀರಾಮಸೇನಾ ವತಿಯಿಂದ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಶ್ರೀರಾಮಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಅಕ್ರಮವಾಗಿ ಗೋವುಗಳ ಮಾರಾಟ, ಸಾಗಾಣಿಕೆ ಹಾಗೂ ಅವುಗಳ ಕಳ್ಳತನ ನಡೆಯುತ್ತಿದೆ. ಬಕ್ರೀದ್ ಹಬ್ಬದ ಸಮಯದಲ್ಲಿ ಗೋಹತ್ಯೆ ಯಥೇಚ್ಛವಾಗಿ ನಡೆಯುತ್ತಿದೆ. ಗೋವುಗಳ ರಕ್ಷಣೆ ಮಾಡುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಬೇಕಿದೆ, ಸರ್ಕಾರವೂ ಸಹ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ ಪ್ರಮೋದ್ ಮುತಾಲಿಕ್ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1964ರ ವಿಧಿ ಅಡಿ ಗೋವುಗಳ ರಕ್ಷಣೆ ಮಾಡಬೇಕು. ವಿಜಯಪುರ ಮಾದರಿ ಎಲ್ಲಾ ಜಿಲ್ಲೆಯಲ್ಲಿಯೂ ಕ್ರಮ ಕೈಗೊಳ್ಳಬೇಕೆಂದರು. ರಾಜ್ಯದಲ್ಲಿ ಕೊರೊನಾ ಸಮಸ್ಯೆ ವಿಚಾರಕ್ಕೆ ಮಾತನಾಡಿದ ಅವರು, ಕೊರೊನಾ ನಿಯಂತ್ರಣ ಮಾಡಲು ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ವಿರೋಧ ಪಕ್ಷಗಳ ಆರೋಪ ಮಾಡುತ್ತಿವೆ. ಸರ್ಕಾರ ಇದಕ್ಕೆ ಸೂಕ್ತ ಉತ್ತರ ನೀಡಬೇಕು ಎಂದರು.
ಇನ್ನು, ಡಾ. ಕಜೆಯವರ ಆಯುರ್ವೇದಿಕ್ ಔಷಧಿಯ 70 ಲಕ್ಷ ಮಾತ್ರೆಗಳನ್ನು ಸರ್ಕಾರ ಖರೀದಿಸಿದೆ. ಆದರೆ, ಅದನ್ನು ಎಲ್ಲಿಯೂ ವಿತರಿಸುತ್ತಿಲ್ಲ, ಇದರಿಂದ ಸರ್ಕಾರದ ಮೇಲೆ ಸಂಶಯ ಬರತೊಡಗಿದೆ. ರಾಜ್ಯದಲ್ಲಿ ಅಲೋಪತಿಕ್ ಮಾಫಿಯಾ ದೊಡ್ಡದಿರುವುದರಿಂದ, ಈ ಲಾಬಿಗೆ ಕಜೆಯವರ ಔಷಧ ಬಲಿಯಾಗುತ್ತಿದೆ ಎಂದರು.