ಕರ್ನಾಟಕ

karnataka

ETV Bharat / state

ಆರ್​ಎಸ್​ಎಸ್​ ಪಥ ಸಂಚಲನದಲ್ಲಿ ಮುಸ್ಲಿಮರಿಂದ ಹೆಡ್ಗೆವಾರ್​ ಭಾವಚಿತ್ರಕ್ಕೆ ಪುಷ್ಪಾರ್ಚನೆ

ಟ್ರ್ಯಾಕ್ಟರ್ ಮೇಲಿದ್ದ ಹೆಡ್ಗೆವಾರ್ ಭಾವಚಿತ್ರಕ್ಕೆ ಮುಸ್ಲಿಂ ಮುಖಂಡರು ಹೂವಿನ‌ಹಾರ ಹಾಕಿದರು. ಮುಸ್ಲಿಂ‌ ಮುಖಂಡರು ಹೂ ಹಾಕುವ ವೇಳೆ ಆರ್​ಎಸ್​ಎಸ್​ ಕಾರ್ಯಕರ್ತರು ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದರು.

Muslims lay flowers Hegadewar photo during RSS Patha Sanchalan
ಆರ್​ಎಸ್​ಎಸ್​ ಪಥ ಸಂಚಲನದಲ್ಲಿ ಮುಸ್ಲಿಮರಿಂದ ಹೆಗಡೆವಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ

By

Published : Oct 9, 2022, 5:11 PM IST

Updated : Oct 9, 2022, 6:46 PM IST

ಹುಬ್ಬಳ್ಳಿ:ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿರುವ ಆರ್​ಎಸ್​ಎಸ್​ ಪಥ ಸಂಚಲನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದರು. ನಗರದ ನೆಹರು ಮೈದಾನದಲ್ಲಿ ಪಥ ಸಂಚಲನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದ್ದು, ಪಥ ಸಂಚಲನದಲ್ಲಿ ಹಿಂದೂ ಮುಸ್ಲಿಂ ಭಾಯಿ ಭಾಯಿ ಎಂಬ ಸಂದೇಶ ಸಾರಿದರು.

ಪಥ ಸಂಚಲನ ಹೊರಟ ಟ್ರ್ಯಾಕ್ಟರ್ ಮೇಲಿದ್ದ ಭಾವಚಿತ್ರಕ್ಕೆ ಮುಸ್ಲಿಂ ಮುಖಂಡರು ಪುಷ್ಪಾರ್ಚನೆ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ಹಾಗೂ ಭಾವೈಕ್ಯೆತೆಗೆ ನಾಂದಿ ಹಾಡಿದರು. ಟ್ರ್ಯಾಕ್ಟರ್ ಮೇಲಿದ್ದ ಹೆಡ್ಗೆವಾರ್ ಭಾವಚಿತ್ರಕ್ಕೆ ಮುಸ್ಲಿಂ ಮುಖಂಡರು ಹೂವಿನ‌ಹಾರ ಹಾಕಿದರು. ಮುಸ್ಲಿಂ‌ ಮುಖಂಡರು ಹೂ ಹಾಕುವ ವೇಳೆ ಆರ್​ಎಸ್​ಎಸ್​ ಕಾರ್ಯಕರ್ತರು ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದರು.

ಆರ್​ಎಸ್​ಎಸ್​ ಪಥ ಸಂಚಲನ

ಗಣ ವೇಶದಲ್ಲಿ ಆಗಮಿಸಿದ ಕೇಂದ್ರ ಸಚಿವರಿಗೆ ಹಾಗೂ ಗಣವೇಶಧಾರಿಗಳಿಗೆ ಮುಸ್ಲಿಂ ಮುಖಂಡರು ಶುಭಕೋರಿ ಭಾವೈಕ್ಯತೆ ಮೆರೆದಿದ್ದಾರೆ. ಈ ಪಥ ಸಂಚಲನ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ.

ಇದನ್ನೂ ಓದಿ:ಎಸ್ಸಿ ಎಸ್ಟಿ ಸಮುದಾಯಗಳಿಗೆ ಆತ್ಮಗೌರವ, ಸ್ವಾಭಿಮಾನದ ಬದುಕು ಕಲ್ಪಿಸಲು ಬದ್ಧ: ವಾಲ್ಮೀಕಿ ಜಯಂತಿ ವೇಳೆ ಸಿಎಂ ಭರವಸೆ

Last Updated : Oct 9, 2022, 6:46 PM IST

ABOUT THE AUTHOR

...view details