ಹುಬ್ಬಳ್ಳಿ:ಮುಸ್ಲಿಂ ಮಹಿಳೆಯೊಬ್ಬರು ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡು ಕಾಯಕ ಪ್ರೀತಿ ತೋರಿಸಿದ್ದಾರೆ.
ಗಣೇಶ ಮೂರ್ತಿ ತಯಾರಿಕೆಯಲ್ಲಿ ಬದುಕು ಕಂಡುಕೊಂಡ ಮುಸ್ಲಿಂ ಮಹಿಳೆ - Muslim woman making a ganesha idol
ಹುಬ್ಬಳ್ಳಿಯ ಗೋಪನಕೊಪ್ಪದ ನಿವಾಸಿ ಅರುಣ ಜಾಧವ್ ಎಂಬುವರು ಕಳೆದ 15 ವರ್ಷಗಳಿಂದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಸುಮನ್ ಹಾವೇರಿ ಎಂಬ ಮುಸ್ಲಿಂ ಮಹಿಳೆ ಉದ್ಯೋಗ ಅರಸಿಕೊಂಡು ಇವರ ಬಳಿ ಬಂದಿದ್ದರಂತೆ. ಹೀಗೆ ಬಂದ ಮಹಿಳೆಗೆ ಅರುಣ ಜಾಧವ್ ತನ್ನ ಜೊತೆ ಗಣೇಶ ಮೂರ್ತಿ ತಯಾರಿಸುವ ಕೆಲಸ ಕೊಟ್ಟಿದ್ದಾರೆ.

ಸರ್ಕಾರ ಪಿಒಪಿ (ಪ್ಲಾಸ್ಟಿಕ್ ಆಫ್ ಪ್ಯಾರಿಸ್) ಗಣೇಶ ಮೂರ್ತಿಗಳನ್ನು ನಿಷೇಧಿಸಿದೆ. ಹೀಗಾಗಿ ಗುಜರಾತ್‌ನ ಪೋರಬಂದರ್ ಪ್ರದೇಶದಿಂದ ಮಣ್ಣು ಹಾಗೂ ಕಾಗದದಿಂದ ಗಣೇಶ ವಿಗ್ರಹಗಳನ್ನು ಇವರು ಇಲ್ಲಿ ತಯಾರಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಈಕೆ ಕೂಡ ಅರುಣ್ ಜೊತೆ ಮೂರ್ತಿ ತಯಾರಿಕೆಯಲ್ಲಿ ಪಳಗಿದ್ದಾರೆ. ಈ ಮೂಲಕ ಜೀವನವನ್ನೂ ಕಂಡುಕೊಂಡಿದ್ದಾರೆ.