ಹುಬ್ಬಳ್ಳಿ:ರಂಜಾನ್ ಪ್ರಯುಕ್ತ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮುಸ್ಲಿಂ ಬಾಂಧವರು ಮೂರು ಸಾವಿರ ಮಠಕ್ಕೆ ಭೇಟಿ ನೀಡಿ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಂಡರು. ಇದೇ ವೇಳೆ ಸ್ವಾಮೀಜಿ ಅವರು ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯ ಕೋರಿದರು.
ರಂಜಾನ್ ಹಿನ್ನೆಲೆ: ಮಠಕ್ಕೆ ಭೇಟಿ ಕೊಟ್ಟು ಸಾಮರಸ್ಯ ಮೆರೆದ ಮುಸ್ಲೀಮರು - ramzan, mooru savira matt, hubballi, guru rajayogindra swamiji
ಹಿಂದೂ-ಮುಸ್ಲೀಮರು ಸ್ನೇಹ ಸೌಹಾರ್ಧತೆಯಿಂದ ಬಾಳಬೇಕು ಎಂದು ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಜನತೆಗೆ ಕರೆ ಕೊಟ್ಟರು.
ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದ ಸ್ವಾಮೀಜಿ
ಬಳಿಕ ಮಾತನಾಡಿದ ಸ್ವಾಮೀಜಿ, ಹಲವು ದಶಕಗಳಿಂದಲೂ ಈ ಸಂಪ್ರದಾಯ ಮುಂದುವರಿದುಕೊಂಡು ಬರುತ್ತಿದೆ. ಹಿಂದೂ-ಮುಸ್ಲೀಮರಲ್ಲಿ ಸಾಮರಸ್ಯ ಎಂದೆಂದಿಗೂ ನೆಲೆಸಲಿ. ಎಲ್ಲರೂ ಸಹೋದರಂತೆ ಬಾಳಬೇಕು ಎಂದು ಆಶೀರ್ವದಿಸಿದರು. ಅಲ್ಲದೇ, ರಂಜಾನ್ ಹಬ್ಬಕ್ಕೂ ಮೂರು ಸಾವಿರ ಮಠಕ್ಕೂ ಅವಿನಾಭಾವ ಸಂಬಂಧವಿದೆ ಎಂದರು. ಮುಸ್ಲಿಂ ಸಮುದಾಯದ ಮೌಲ್ವಿಗಳು, ಮುಖಂಡ ಎ.ಎಂ.ಹಿಂಡಸಗೇರಿ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.