ಹುಬ್ಬಳ್ಳಿ: ನಡುರಸ್ತೆಯಲ್ಲಿಯೇ ಯುವಕನನ್ನು ಅಟ್ಟಾಡಿಸಿ ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಲಾಗಿರುವ ಘಟನೆ ಕೃಷ್ಣ ನಗರದಲ್ಲಿ ನಡೆದಿದೆ.
ಲೋಕೇಶ್ ಕಡೆಮನಿ ಕೊಲೆಯಾದ ಯುವಕ. ಕೃಷ್ಣ ನಗರದ ನಿವಾಸಿಯಾದ ಈತನನ್ನು ಜನನಿಬಿಡ ಪ್ರದೇಶದಲ್ಲಿ ನಾಲ್ಕೈದು ಯುವಕರ ಗುಂಪು ಬೈಕ್ನಲ್ಲಿ ಬಂದು, ಅಟ್ಟಾಡಿಸಿ ಚಾಕುವಿನಿಂದ ಹಿರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಯುವಕನನ್ನು ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು
ಇನ್ನು ಲೋಕೇಶ್ ಕೆಲ ದಿನಗಳಿಂದ ಸ್ಯಾನಿಟೈಸರ್ ಮಾರಾಟ ಮಾಡುತ್ತಿದ್ದ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಹಳೇ ವೈಷಮ್ಯ ಅಥವಾ ಕ್ಷುಲಕ ಕಾರಣಕ್ಕೆ ಕೊಲೆಯಾಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.