ಕರ್ನಾಟಕ

karnataka

ETV Bharat / state

ಅಡುಗೆ ಸರಿ ಮಾಡಿಲ್ಲವೆಂದು ಪತ್ನಿಯ ಕೊಲೆ: ಪರಾರಿಯಾಗಿದ್ದ ಪತಿಯ ಬಂಧನ - ಹಸೀನಾ ಬಾನು

ರಾಜೇಸಾಬ್​ ಮಾಣಿಕಬಾವಿ ಎಂಬಾತ ತನ್ನ ಎರಡನೇ ಪತ್ನಿ ಅಡುಗೆ ಸರಿ‌ ಮಾಡಿಲ್ಲವೆಂದು ಕೊಲೆ ಮಾಡಿ ಪರಾರಿಯಾಗಿದ್ದ. ಇದೀಗ ಆತನನ್ನು ಕಲಘಟಗಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪತಿಯನ್ನು ಬಂಧಿಸಿದ ಪೊಲೀಸರು

By

Published : Sep 30, 2019, 6:46 PM IST

ಹುಬ್ಬಳ್ಳಿ:ಅಡುಗೆ ಸರಿ‌ಮಾಡಿಲ್ಲವೆಂದು ತನ್ನ ಎರಡನೇ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪತಿಯನ್ನು ಕಲಘಟಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸೆ. 24ರಂದು ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದಲ್ಲಿ ರಾಜೇಸಾಬ್ ಮಾಣಿಕಬಾವಿ ಎಂಬಾತ ತನ್ನ ಎರಡನೇ ಪತ್ನಿ ಹಸೀನಾ ಬಾನು (28) ಎಂಬಾಕೆಯನ್ನು ಕೊಲೆ ಮಾಡಿ‌ ಪರಾರಿಯಾಗಿದ್ದ. ಮೊದಲ‌ ಪತ್ನಿಗೆ ಮಕ್ಕಳಾಗಿಲ್ಲವೆಂದು ಇತ್ತೀಚೆಗಷ್ಟೆ ರಾಜೇಸಾಬ್ ಎರಡನೇ ಮದುವೆ ಮಾಡಿಕೊಂಡಿದ್ದ.

ಹಸೀನಾ ಬಾನುವಿಗೆ ಅಡುಗೆ ಮಡೋಕೆ ಬರೋದಿಲ್ಲವೆಂದು ರಾಜೇಸಾಬ್ ಆಗಾಗ ಜಗಳ ತಗೆಯುತ್ತಿದ್ದು, ಸೆ. 24ರಂದು ರಾತ್ರಿ ಮಾತಿಗೆ ಮಾತು ಬೆಳೆದು ಮಾರಕಾಸ್ತ್ರಗಳಿಂದ ಕೊಲೆ‌ ಮಾಡಿ ಪರಾರಿಯಾಗಿದ್ದ ಎನ್ನಲಾಗಿದೆ.‌ ಈ‌ ಸಂಬಂಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು‌. ಇದೀಗ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ABOUT THE AUTHOR

...view details