ಹುಬ್ಬಳ್ಳಿ: ಮಧ್ಯರಾತ್ರಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಶವವನ್ನು ಚರಂಡಿಗೆಸೆದು ಹೋಗಿರುವ ಘಟನೆ ನಗರದ ದೇವಾಂಗಪೇಟೆ ಬಡಾವಣೆಯಲ್ಲಿ ನಡೆದಿದೆ.
ಮಾಬುಸಾಬ್ ಅಲ್ಲಾಭಕ್ಷ ಶಿವಳ್ಳಿ ಕೊಲೆಯಾದ ವ್ಯಕ್ತಿ. ಈತ ಕಟ್ಟಡ ಕಾರ್ಮಿಕ ಕೆಲಸ ಮಾಡಿಕೊಂಡಿದ್ದನಂತೆ. ದುಷ್ಕರ್ಮಿಗಳು ಈತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ.