ಹುಬ್ಬಳ್ಳಿ: ಎರಡು ದಿನಗಳ ಹಿಂದೆ ಹೆರಿಗೆಗಾಗಿ ತವರಿಗೆ ಬಂದಿರುವ ಪತ್ನಿ ನೋಡಲು ಅಂಚಟಗೇರಿಗೆ ಬಂದಿದ್ದ ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಅಂಚಟಗೇರಿ ಗ್ರಾಮದ ಬಳಿ ನಡೆದಿದೆ.
ಹಾನಗಲ್ ನಾರಾಯಣ ದೇವಸ್ಥಾನ ಬಳಿಯ ನಿವಾಸಿ ಜಗದೀಶ ಮನೋಹರ ಕೊಲ್ಲಾಪುರ (27) ಮೃತಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ. ನಾಲ್ಕೈದು ದಿನಗಳ ಹಿಂದೆ ಹಾನಗಲ್ ಬಿಟ್ಟಿದ್ದು, ಎರಡು ದಿನಗಳ ಹಿಂದೆ ಹೆರಿಗೆಗಾಗಿ ತವರಿಗೆ ಬಂದಿರುವ ಪತ್ನಿಯನ್ನು ನೋಡಲು ಅಂಚಟಗೇರಿಗೆ ಬಂದಿದ್ದ ಎಂದು ತಿಳಿದು ಬಂದಿದೆ.