ಕರ್ನಾಟಕ

karnataka

ETV Bharat / state

ಸಚಿವ ಶೆಟ್ಟರ್ ಮನೆಗೆ ಶಾಸಕ ಮುನಿರತ್ನ ಭೇಟಿ; ಪರಸ್ಪರ ಅಭಿನಂದನೆ - Muniratna visit news

ನೂತನ ಶಾಸಕ ಮುನಿರತ್ನ ಇಂದು ಹುಬ್ಬಳ್ಳಿಗೆ ಭೇಟಿ ನೀಡಿದ್ದರು. ತಮ್ಮ ಗೆಲುವಿಗೆ ಶ್ರಮಿಸಿದ ಇಲ್ಲಿನ ಪಕ್ಷದ ಮುಖಂಡರನ್ನು ಭೇಟಿ ಮಾಡಿ ಅಭಿನಂದಿಸಿದರು.

Muniratna visited to Minister Shetter's home
ಪರಸ್ಪರ ಅಭಿನಂದನೆ ಸಲ್ಲಿಕೆಯಲ್ಲಿ ಶಾಸಕ ಮುನಿರತ್ನ ಹಾಗೂ ಸಚಿವ ಜಗದೀಶ್ ಶೆಟ್ಟರ್​

By

Published : Nov 14, 2020, 8:55 PM IST

ಹುಬ್ಬಳ್ಳಿ: ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ರಾಜರಾಜೇಶ್ವರಿ ನಗರದಿಂದ ವಿಜೇತರಾದ ಶಾಸಕ ಮುನಿರತ್ನ ಇಂದು ಹುಬ್ಬಳ್ಳಿಗೆ ಭೇಟಿ ನೀಡಿ ತಮ್ಮ ಗೆಲುವಿಗೆ ಶ್ರಮಿಸಿದ ಇಲ್ಲಿನ ಪಕ್ಷದ ಮುಖಂಡರನ್ನು ಭೇಟಿ ಮಾಡಿ ಅಭಿನಂದಿಸಿದರು.

ಪರಸ್ಪರ ಅಭಿನಂದನೆ ಸಲ್ಲಿಕೆಯಲ್ಲಿ ಶಾಸಕ ಮುನಿರತ್ನ ಹಾಗೂ ಸಚಿವ ಜಗದೀಶ್ ಶೆಟ್ಟರ್​

ಹುಬ್ಬಳ್ಳಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್​​ ಅವರ ಮನೆಗೆ ಭೇಟಿ ನೀಡಿ ಶಾಲು ಹೊದಿಸಿ ಅವರನ್ನು ಸನ್ಮಾನಿಸಿದರು. ಅದೇ ರೀತಿ ಭಾರತೀಯ ಜನತಾ ಪಕ್ಷದ ಮೂಲಕ ರಾಜರಾಜೇಶ್ವರಿ ನಗರದಲ್ಲಿ ವಿಜಯ ಪತಾಕೆ ಹಾರಿಸಿದ ಶಾಸಕ ಮುನಿರತ್ನ ಅವರಿಗೆ ಜಗದೀಶ್ ಶೆಟ್ಟರ್​ ಕೂಡ ಅಭಿನಂದನೆ ಸಲ್ಲಿಸಿದರು. ಬಳಿಕ ಇಬ್ಬರೂ ದೀಪಾವಳಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಕೆಲಹೊತ್ತು ಮಾತುಕತೆ ನಡೆಸಿದರು.

ಪರಸ್ಪರ ಅಭಿನಂದನೆ ಸಲ್ಲಿಕೆಯಲ್ಲಿ ಶಾಸಕ ಮುನಿರತ್ನ ಹಾಗೂ ಸಚಿವ ಜಗದೀಶ್ ಶೆಟ್ಟರ್​

ABOUT THE AUTHOR

...view details