ಹುಬ್ಬಳ್ಳಿ:ಇಲ್ಲಿನವಿದ್ಯಾನಗರದ ಶಿರೂರ ಪಾರ್ಕ್ ಬಳಿಯ ಸಾರ್ವಜನಿಕ ಬಸ್ ನಿಲ್ದಾಣ ಹಾಗೂ ಫುಟ್ಪಾತ್ ಆಕ್ರಮಿಸಿಕೊಂಡು ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದ ಕಟ್ಟಡ ಮಾಲೀಕನಿಗೆ ಮಹಾನಗರ ಪಾಲಿಕೆ ನೋಟಿಸ್ ನೀಡಿದೆ.
ಸುನೀಲ್ ಕೊಠಾರಿ ಎಂಬುವರಿಗೆ ಸೇರಿರುವ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ವೇಳೆ ಬಸ್ ನಿಲ್ದಾಣ ಸೇರಿದಂತೆ ಫುಟ್ಪಾತ್ ಅತಿಕ್ರಮಿಸಲಾಗಿದೆ. ಈ ಬಗ್ಗೆ ಹಲವು ಬಾರಿ ಮಹಾನಗರ ಪಾಲಿಕೆ ಮಾಲೀಕರ ಗಮನಕ್ಕೆ ತಂದಿದೆ ಎನ್ನಲಾಗ್ತಿದೆ. ಇಷ್ಟಾದರೂ ಕಾಮಗಾರಿ ಮುಂದುವರಿಸಿದ್ದ ಕಾರಣ ನೋಟಿಸ್ ಜಾರಿ ಮಾಡಲಾಗಿದೆ.