ಕರ್ನಾಟಕ

karnataka

ETV Bharat / state

Santhosh Lad: ಮುನೇನಕೊಪ್ಪ, ಚಿಕ್ಕನಗೌಡರು ಬರಬಹುದೆಂಬ ಮಾಹಿತಿ ಇದೆ ಅಂತಾ ನಾನು ಹೇಳಿದ್ದೆ; ಲಾಡ್ ಸ್ಪಷ್ಟನೆ - ಈಟಿವಿ ಭಾರತ್​ ಕನ್ನಡ ನ್ಯೂಸ್

ಧಾರವಾಡ ಜಿಲ್ಲೆಯಿಂದ ಬಿಜೆಪಿಯ ಇಬ್ಬರು ನಾಯಕರು ಕಾಂಗ್ರೆಸ್ ಸೇರ್ಪಡೆ ಹೇಳಿಕೆ ಬಗ್ಗೆ ಸಚಿವ ಸಂತೋಷ್​ ಲಾಡ್ ಸ್ಪಷ್ಟನೆ ಕೊಟ್ಟಿದ್ದಾರೆ.

Etv Bharat
Etv Bharat

By ETV Bharat Karnataka Team

Published : Aug 29, 2023, 4:27 PM IST

ಬಿಜೆಪಿಯ ಇಬ್ಬರು ನಾಯಕರು ಕಾಂಗ್ರೆಸ್ ಸೇರ್ಪಡೆ ಹೇಳಿಕೆ ಬಗ್ಗೆ ಸಚಿವ ಸಂತೋಷ್​ ಲಾಡ್ ಸ್ಪಷ್ಟನೆ

ಧಾರವಾಡ :ಕೆಲ ದಿನಗಳಿಂದಜಿಲ್ಲೆಯಿಂದ ಬಿಜೆಪಿಯ ಇಬ್ಬರು ನಾಯಕರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ದ್ವಂದ್ವ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹಾಗು ಕುಂದಗೋಳ ಮಾಜಿ ಶಾಸಕ ಚಿಕ್ಕನಗೌಡ ಅವರು ಬರಬಹುದೆಂಬ ಮಾಹಿತಿ ಇದೆ ಅಂತಾ ನಾನು ಹೇಳಿದ್ದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್​ ಲಾಡ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವರು ಸ್ವಯಂ ಪ್ರೇರಣೆಯಿಂದ ಪಕ್ಷಕ್ಕೆ ಬರುವುದಾಗಿ ಹೇಳಿದ್ದಾರೆ. ಇನ್ನು ಕೆಲವರು ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಹೇಳುತ್ತಿದ್ದಾರೆ. ಯಾರು ಆಸಕ್ತರಿದ್ದಾರೆ ಅವರನ್ನು ಸ್ವಾಗತಿಸುತ್ತೇವೆ. ನಾವೇನು ಶಾಸಕರನ್ನು ಕಾಯ್ದಿರಿಸಿಕೊಳ್ಳುತ್ತಿಲ್ಲ. ನಮ್ಮ ಪಕ್ಷದಲ್ಲಿ ಯಾವುದೂ ರಿಸರ್ವ್ ಇಲ್ಲ. ಪ್ರಜಾಪ್ರಭುತ್ವದ ದೊಡ್ಡ ಪಕ್ಷ ನಮ್ಮದು, ನಮ್ಮ ಪಕ್ಷಕ್ಕೆ ಯಾರೇ ಬರಬಹುದು. ಎರಡು ಕಡೆ ಬಾಗಿಲು ಇರುವ ಬಸ್‌ನಂತೆ, ನಮ್ಮ ಪಕ್ಷ ಬೇಕಾದವರು ಬರಬಹುದು ಎಂದರು.

ಬಿಜೆಪಿಯ ಶಾಸಕರು ನಾಯಕರು ಸಿಎಂ ಸಿದ್ದರಾಮಯ್ಯ ಭೇಟಿ ವಿಚಾರಕ್ಕೆ ಮಾತನಾಡಿದ ಅವರು, ಅಭಿವೃದ್ಧಿ ಕೆಲಸಗಳಿಗಾಗಿ ಭೇಟಿಯಾಗುತ್ತಾರೆ. ರಾಜಕೀಯ ಅಜೆಂಡಾ ಸಹ ಇರಬಹುದು. ಯಾರು ಯಾರು ಭೇಟಿಯಾಗಿದ್ದಾರೋ ಅವರನ್ನೇ ಭೇಟಿ ಉದ್ದೇಶ ಏನು? ಅಂತಾ ಕೇಳಬೇಕು. ನಮಗೆ ಜಿಲ್ಲೆಯ ಮಾಹಿತಿ ಮಾತ್ರ ಇದೆ. ಹೀಗಾಗಿ ಮುನೇನಕೊಪ್ಪ,‌ ಚಿಕ್ಕನಗೌಡರ ಬರಬಹುದು ಅಂತಾ ಹೇಳಿದ್ದೆ, ಬರ್ತಾರೆ ಅಂತಾ ಹೇಳಿಲ್ಲ ಎಂದು ತಿಳಿಸಿದರು.

ಗೃಹಲಕ್ಷ್ಮಿ ಕಾರ್ಯಕ್ರಮ‌ ಪರ ಎಸ್​.ಟಿ ಸೋಮಶೇಖರ್ ಪ್ರಚಾರಕ್ಕೆ ಪ್ರತಿಕ್ರಿಯಿಸಿ ಸಚಿವರು, ಇದು ಸರ್ಕಾರದ ಕಾರ್ಯಕ್ರಮ. ಹೀಗಾಗಿ ಬಿಜೆಪಿಯವರು ಕೈ ಜೋಡಿಸಬಹುದು. ಇದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲ ಆಗುತ್ತದೆ ಎಂದರು. ನಾಳೆ ಇಡೀ ರಾಜ್ಯದಲ್ಲಿ ಗೃಹ ಲಕ್ಷ್ಮೀ ಕಾರ್ಯಕ್ರಮ ಆರಂಭ ಆಗಲಿದೆ. ಇದಕ್ಕಾಗಿ ನಮ್ಮ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಮೈಸೂರಿಗೆ ಬರುತ್ತಿದ್ದಾರೆ. ಲಕ್ಷಾಂತರ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡುತ್ತಿದ್ದೇವೆ. ಸಿಎಂ ಹಾಗೂ ಸರ್ಕಾರದ ಎಲ್ಲ ಸಚಿವರಿಗೆ ನನ್ನ ಕಡೆಯಿಂದ ಅಭಿನಂದನೆ ಸಲ್ಲಿಸುತ್ತೇನೆ. ಯೋಜನೆಯಿಂದ ಬಡ ಜನರಿಗೆ ಅನುಕೂಲ ಆಗಲಿದೆ. ದೇಶದಲ್ಲೇ ಇದು ಇತಿಹಾಸವಾಗಲಿದೆ ಎಂದು ಹೇಳಿದರು.

ಇದು ಜಿಡಿಪಿಗೆ ಸಹಕಾರಿಯಾಗುವ ಯೋಜನೆಯಾಗಿದೆ. ವಿವಿಧ ಯೋಜನೆಗಳಿಂದ ಒಂದು ಕುಟುಂಬಕ್ಕೆ 6 ಸಾವಿರ ಕೊಡಂತೆ ಆಗುತ್ತದೆ. ಧಾರವಾಡ ಜಿಲ್ಲೆಯಲ್ಲಿ 143 ಗ್ರಾಮ ಪಂಚಾಯತಿಗಳಲ್ಲಿ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಹು-ಧಾ ಅವಳಿ ನಗರದಲ್ಲಿ 12 ಕಡೆ ಕಾರ್ಯಕ್ರಮ ನಡೆಯಲಿದೆ. ಪಾಲಿಕೆಯ 83 ವಾರ್ಡ್ ಗಳಲ್ಲಿ ಕಾರ್ಯಕ್ರಮ ವೀಕ್ಷಣೆಗೆ ಸ್ಕ್ರೀನ್ ಹಾಕಲಾಗುವುದು ಧಾರವಾಡ ಜಿಲ್ಲೆಯಲ್ಲಿ 4.04 ಲಕ್ಷ ಫಲಾನುಭವಿಗಳಿದ್ದಾರೆ. ಅದರಲ್ಲಿ 3.40 ಲಕ್ಷ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಶೇಕಡಾ 89ರಷ್ಟು ನೋಂದಣಿಯಾಗಿದೆ. ಮುಂದೆ ಉಳಿದವರದ್ದು ನೋಂದಣಿ ಆಗಲಿದೆ ಎಂದು ಸಚಿವರು ಅಭಿಪ್ರಾಯ ಹಂಚಿಕೊಂಡರು.

ಇದನ್ನೂ ಓದಿ :ಧಾರವಾಡದಿಂದ ಇಬ್ಬರು ಬಿಜೆಪಿ ನಾಯಕರು ಕಾಂಗ್ರೆಸ್​ಗೆ ಬರುವ ಮಾಹಿತಿ ಇದೆ: ಸಚಿವ ಸಂತೋಷ್​ ಲಾಡ್

ABOUT THE AUTHOR

...view details