ಹುಬ್ಬಳ್ಳಿ:'ಮುಂದಿನ ನಿಲ್ದಾಣ' ಚಿತ್ರ ಇದೇ ನ. 29 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ ಎಂದು ಚಿತ್ರದ ನಿರ್ದೇಶಕ ವಿನಯ ಭಾರದ್ವಾಜ್ ತಿಳಿಸಿದರು.
ನಗರದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತದೆ ಎಂಬ ನಂಬಿಕೆಯಾಗಿದೆ. ಈ ಸಿನಿಮಾದಲ್ಲಿ ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಖ್ಯಾತಿಯ ಪ್ರವೀಣ್ ತೇಜ್ ಹಾಗೂ ರಂಗಿತರಂಗ ಸಿನಿಮಾದ ಖ್ಯಾತ ನಟಿ ರಾಧಿಕಾ ನಾರಾಯಣ ಈ ಸಿನಿಮಾದಲ್ಲಿ ಭಿನ್ನವಾಗಿ ಕಾಣಿಸಿಕೊಂಡಿದ್ದು, ಅನನ್ಯಾ ಕಶ್ಯಪ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.