ಕರ್ನಾಟಕ

karnataka

ETV Bharat / state

ಮಗನ ಆತ್ಮಹತ್ಯೆ ಬೆನ್ನಲ್ಲೇ ತಾಯಿ ಕೋವಿಡ್​ಗೆ ಬಲಿ: ಹುಬ್ಬಳ್ಳಿಯಲ್ಲಿ 4 ದಿನದ ಅಂತರದಲ್ಲಿ ಇಬ್ಬರು ಸಾವು - ಯುವಕ ಆತ್ಮಹತ್ಯೆ

ನಾಲ್ಕು ದಿನಗಳ ಅಂತರದಲ್ಲಿ ತಾಯಿ, ಮಗ ಮೃತಪಟ್ಟ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಮಗ ಆತ್ಮಹತ್ಯೆ ಮಾಡಿಕೊಂಡರೆ, ತಾಯಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.

Mother died from Covid after Son Committed Suicide
ಹುಬ್ಬಳ್ಳಿಯಲ್ಲಿ ತಾಯಿ ಮಗ ಸಾವು

By

Published : May 6, 2021, 12:12 PM IST

ಹುಬ್ಬಳ್ಳಿ:ಕೋವಿಡ್ ಸೋಂಕಿತ ತಾಯಿಯ ನರಳಾಟ ನೋಡಲಾಗದೆ ಮಗ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ, ತಾಯಿಯೂ ಚಿಕಿತ್ಸೆ ಫಲಿಸದೆ ಮೃತಪಟ್ಟ ಹೃದಯವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ.

ನಗರದ ಶಬರಿ ನಗರದ ನಿವಾಸಿಗಳಾದ ಇವರಿಗೆ ಒಂದು ವಾರದ ಹಿಂದೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಹೀಗಾಗಿ, ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲಿ ತಾಯಿ ಉಸಿರಾಟದ ಸಮಸ್ಯೆಯಿಂದ ನರಳುತ್ತಿರುವುದನ್ನು ನೋಡಲಾಗದೆ ಮಗ ಮನೆಗೆ ಮರಳಿ ಹೋಮ್ ಕ್ವಾರಂಟೈನ್​ಗೆ ಒಳಗಾಗಿದ್ದ. ಮನೆಗೆ ಬಂದ ಮಾರನೇ ದಿನ ಮೇ 2 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಮಗ ಮೃತಪಟ್ಟ ಬೆನ್ನಲ್ಲೇ ತಾಯಿಯೂ ಕೂಡ ಚಿಕಿತ್ಸೆ ಫಲಿಸದೆ ಇಂದು ಕಿಮ್ಸ್​ನಲ್ಲಿ ಕೊನೆಯುಸಿರೆಳೆದಿದ್ದಾರೆ.

ಇದನ್ನೂಓದಿ : ಬೆಡ್​ಗಾಗಿ ಸಿಎಂ ನಿವಾಸದೆದುರು ಗೋಗರೆದ ಸೋಂಕಿತನ ಪತ್ನಿ: ಆಸ್ಪತ್ರೆಗೆ ಹೋಗುವಾಗಲೇ ಹಾರಿಹೋಯ್ತು ಪ್ರಾಣ

ಒಂದೇ ಮನೆಯ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ABOUT THE AUTHOR

...view details