ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಮಂಡಿಗನಾಳ ಗ್ರಾಮದಲ್ಲಿ ಕಳೆದ ಕಳೆದ ಮೂರು ತಿಂಗಳುಗಳಿಂದ ಗ್ರಾಮದ ಜನರಿಗೆ ತೊಂದರೆ ನೀಡುತ್ತಿದ್ದ ಹುಚ್ಚು ಮಂಗನನ್ನು ಪ್ರಾಣಿ ರಕ್ಷಣಾ ತಂಡವು ಗ್ರಾಮಸ್ಥರ ಸಹಕಾರದಿಂದ ಹಿಡಿದು ಕಾಡಿಗೆ ಬಿಟ್ಟಿದೆ.
ಹುಬ್ಬಳ್ಳಿ: ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ಮಂಗ ಸೆರೆ, ನಿಟ್ಟುಸಿರು ಬಿಟ್ಟ ಜನರು - Monkey Capture by Animal Protection Team
ಮಂಡಿಗನಾಳ ಗ್ರಾಮದಲ್ಲಿ ವಾಸವಾಗಿದ್ದ ಮಂಗವೊಂದು ಗ್ರಾಮಸ್ಥರಿಗೆ ತೊಂದರೆ ನೀಡುತಿತ್ತು. ಚಿಕ್ಕಮಕ್ಕಳು, ದೊಡ್ಡವರ ಕೈಯಲ್ಲಿನ ಆಹಾರ ಪದಾರ್ಥಗಳನ್ನ ಕಸಿದು ಓಡುವುದು, ಮನೆಗಳ ಮೇಲೆ ಉಳಿದ ಮಂಗಗಳ ಜೊತೆ ಕಾದಾಟ ಮಾಡುವುದು ಸೇರಿದಂತೆ ಬೆಳೆಸಿದ ಮರ ಗಿಡಗಳನ್ನು ಹಾನಿ ಮಾಡುತ್ತಿತ್ತು. ಈ ಮಂಗನ ಉಪಟಳಕ್ಕೆ ಈಗ ಬ್ರೇಕ್ ಹಾಕಲಾಗಿದೆ.

ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದ ಮಂಗ ಸೆರೆ
ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದ ಮಂಗ ಸೆರೆ
ಮಂಡಿಗನಾಳ ಗ್ರಾಮದಲ್ಲಿ ವಾಸವಾಗಿದ್ದ ಹುಚ್ಚು ಮಂಗವೊಂದು ಗ್ರಾಮಸ್ಥರಿಗೆ ತೊಂದರೆ ನೀಡುತಿತ್ತು. ಚಿಕ್ಕಮಕ್ಕಳು, ದೊಡ್ಡವರ ಕೈಯಲ್ಲಿದ್ದ ಆಹಾರ ಪದಾರ್ಥಗಳನ್ನ ಕಸಿದು ಓಡುವುದು, ಮನೆಗಳ ಮೇಲೆ ಉಳಿದ ಮಂಗಗಳ ಜೊತೆ ಕಾದಾಟ ಮಾಡುವುದು ಸೇರಿದಂತೆ ಬೆಳೆಸಿದ ಮರ ಗಿಡಗಳನ್ನು ಹಾನಿ ಮಾಡುತ್ತಿತ್ತು. ಇದರಿಂದ ಬೇಸತ್ತ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು .
ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಮಂಗನನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಇದರಿಂದಾಗಿ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.