ಕರ್ನಾಟಕ

karnataka

ETV Bharat / state

ಮದ್ಯ ಮಾರಾಟದ ವಿರುದ್ಧ ಮಹಿಳೆಯರ ‘ಮನಿ ಆರ್ಡರ್​ ಆಂದೋಲನ’ - ಮಹಿಳೆಯರಿಂದ ಮನಿ ಆರ್ಡರ್​​​

ಆದಾಯದ ನೆಪ ಹೇಳಿ ಸಮಾಜದ ವಿರೋಧದ ನಡುವೆಯೂ ಮತ್ತೆ ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ಕೊಟ್ಟಿದ್ದು‌ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಧಾರವಾಡದ ಮಹಿಳೆಯರು ಇಂದು ಮುಖ್ಯಮಂತ್ರಿಗಳಿಗೆ‌ ತಮ್ಮ ಆದಾಯದ ಹಣವನ್ನು ಮನಿ ಆರ್ಡರ್ ಮಾಡಿ ವಿಭಿನ್ನ ಹೋರಾಟ ನಡೆಸಿದ್ದಾರೆ.

: ಸರ್ಕಾರಕ್ಕೆ ಮನಿ ಆರ್ಡರ್ ಮಾಡಿ ಮಹಿಳೆಯರ ಪ್ರತಿಭಟನೆ

By

Published : May 22, 2020, 7:42 PM IST

ಧಾರವಾಡ: ಲಾಕ್​ಡೌನ್​​ ನಡುವೆ ಸರ್ಕಾರ ಮದ್ಯ ಮಾರಾಟ‌ಕ್ಕೆ ಅನುಮತಿ ನೀಡಿದ ದಿನದಿಂದ ವಿರೋಧ ವ್ಯಕ್ತವಾಗುತ್ತಿದೆ. ಮೊದಲು ಶಾಸಕ ಅರವಿಂದ ಬೆಲ್ಲದ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಧಾರವಾಡ ಮಹಿಳೆಯರು ಮದ್ಯ ಮಾರಾಟದ ವಿರುದ್ದ ‘ಮನಿ ಆರ್ಡರ್ ಆಂದೋಲನ’ ಪ್ರಾರಂಭಿಸಿದ್ದಾರೆ.

ಆದಾಯದ ನೆಪ ಹೇಳಿ ಸಮಾಜದ ವಿರೋಧದ ನಡುವೆಯೂ ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ಕೊಟ್ಟಿದ್ದು‌ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ. ಇಂದು ಧಾರವಾಡದ ಮಹಿಳೆಯರು ಮುಖ್ಯಮಂತ್ರಿಗಳಿಗೆ‌ ತಮ್ಮ ಆದಾಯದ ಹಣವನ್ನು ಮನಿ ಆರ್ಡರ್ ಮಾಡಿ ವಿಭಿನ್ನ ಆಂದೋಲನ ನಡೆಸಿದರು.

ಸರ್ಕಾರಕ್ಕೆ ಮನಿ ಆರ್ಡರ್ ಮಾಡಿ ಮಹಿಳೆಯರ ಪ್ರತಿಭಟನೆ

ಸರ್ಕಾರದ ಮದ್ಯ ಮಾರಾಟದ ನಿರ್ಧಾರಕ್ಕೆ ಧಾರವಾಡದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮದ್ಯ ಮಾರಾಟಕ್ಕೆ ವಿರೋಧ ವ್ಯಕ್ಯಪಡಿಸಿದ್ದ ಆಡಳಿತರೂಢ ಬಿಜೆಪಿ ಸರ್ಕಾರದ ಶಾಸಕ ಅರವಿಂದ ಬೆಲ್ಲದ ಸಮರ ಸಾರಿರುವ ಬೆನ್ನಲ್ಲೆ ಮಹಿಳೆಯರು ಹೋರಾಟ ಆರಂಭಿಸಿದ್ದಾರೆ.

ಈಗ ಮತ್ತೆ ಮದ್ಯದ ಕಾರಣಕ್ಕೆ ಕೊಲೆ, ಆಸ್ತಿಪಾಸ್ತಿ ‌ಹಾನಿ, ಹಿಂಸೆ, ದೌರ್ಜನ್ಯ ದಿನೆ ದಿನೇ ಹೆಚ್ಚುತ್ತಿದೆ.‌ ಒಂದೆಡೆ ಉದ್ಯೋಗ ಇಲ್ಲ, ಕೂಲಿ ಇಲ್ಲ , ಕೈಯಲ್ಲಿ ಹಣ ಇಲ್ಲ. ಮದ್ಯ ವ್ಯಸನಿಗಳು ಮನೆಯಲ್ಲಿದ್ದ ಅಳಿದುಳಿದ ಸಾಮಾನುಗಳನ್ನೆಲ್ಲ ಮದ್ಯದ ಅಂಗಡಿಗಳಿಗೆ ಅಡವು ಇಡುತ್ತಿದ್ದಾರೆ. ಆಹಾರ ಭದ್ರತೆಗಾಗಿ ‌ನೀಡಿದ ಆಹಾರ ಧಾನ್ಯ , ಜೀವನ ನಿರ್ವಹಣೆಗಾಗಿ ಜನ್​ಧನ್- ಕಾರ್ಮಿಕ ಕಾರ್ಡುಗಳಿಗೆ ಜಮಾ ಆದ ಹಣವೆಲ್ಲ ಪುನಃ ಮದ್ಯದ ಅಂಗಡಿಗಳ ಮೂಲಕ ಸರ್ಕಾರದ ಖಜಾನೆ ಸೇರುತ್ತಿವೆ. ಈ ಕಾರಣಕ್ಕಾಗಿ ಮಹಿಳೆಯರು ಮುಖ್ಯಮಂತ್ರಿಗಳಿಗೆ ತಮ್ಮ ಆದಾಯದ ಸ್ವಲ್ಪ ಹಣವನ್ನು ಅಂಚೆ ಇಲಾಖೆ ಮೂಲಕ ಮನಿ ಆರ್ಡರ್​ ಮಾಡಿ ವಿಭಿನ್ನ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ.

ಆದಾಯಕ್ಕಾಗಿ ಹಾತೊರೆಯುತ್ತಿರುವ ಸರ್ಕಾರದ ಖಜಾನೆಗೆ ನಾವು ಹಣ ತುಂಬುತ್ತೇವೆ. ಆದರೆ ಮದ್ಯ ನಿಷೇಧ ಮಾಡಿ ನಮಗೆ ಬದುಕಲು ಅವಕಾಶ ಮಾಡಿಕೊಡಿ ಎಂದು ಸರ್ಕಾರಕ್ಕೆ ಸಂದೇಶ ರವಾನೆ ಮಾಡುವ ಸಲುವಾಗಿ ಅಂಚೆ ಕಚೇರಿಯಲ್ಲಿ ಮುಖ್ಯಮಂತ್ರಿಗಳಿಗೆ 10, 20 ರೂಪಾಯಿಗಳನ್ನು ಮನಿ‌ ಆರ್ಡರ್ ಮಾಡಿದ್ದಾರೆ.

ABOUT THE AUTHOR

...view details