ಧಾರವಾಡ: ಸರ್ಕಾರದ ಮೀಸಲಾತಿ ಹಂಚಿಕೆ ಜಾರಿಯಾಗುವುದಿಲ್ಲ ಅದೊಂದು ಚುನಾವಣೆ ಕುತಂತ್ರವಷ್ಟೇ ಎಂದು ಮಾಜಿ ಎಂಎಲ್‌ಸಿ ಮೋಹನ ಲಿಂಬಿಕಾಯಿ ಆರೋಪಿಸಿದ್ದಾರೆ. ನವಲಗುಂದ ಕ್ಷೇತ್ರದ ಅಣ್ಣಿಗೇರಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 1962ರಲ್ಲಿ ಕಾಂಗ್ರೆಸ್‌ನಲ್ಲಿ 60 ಜನ ಲಿಂಗಾಯತರು ಶಾಸಕರಾಗಿದ್ದರು.
ಆ ನಂತರ 1967ರಲ್ಲಿ 56 ಜನ ಲಿಂಗಾಯತರು ಕಾಂಗ್ರೆಸ್‌ನಿಂದ ಆರಿಸಿ ಬಂದಿದ್ದರು. ಮುಂದೆ ಜನತಾದಳ, ಜನತಾ ರಂಗ ಬಂತು. ಆಗ ಬಿಜೆಪಿ ಕಡೆ ಹೆಚ್ಚಿನ ಒಲವು ತೋರಲಾಯ್ತು. ಕಾಂಗ್ರೆಸ್ ಲಿಂಗಾಯತರನ್ನು ಕಡೆಗಣಿಸಿತು ಅಂತಾ ಬಿಜೆಪಿಗೆ ಒಲವು ತೋರಿಸಿದ್ದರು. ಆದರೆ ಆ ಬಳಿಕ ಬಿಜೆಪಿ ನಾಟಕ ಮಾಡುತ್ತಿರೋದು ಗೊತ್ತಾಯಿತು ಎಂದು ಹರಿಹಾಯ್ದರು.
ಇದನ್ನೂ ಓದಿ:ಬಿಜೆಪಿ ಅಧಿಕಾರಕ್ಕೆ ಬಂದ್ರೆ ಸವದಿ ಸಹೋದರರ ಸಕ್ಕರೆ ಕಾರ್ಖಾನೆ ಅವ್ಯವಹಾರ ಸಿಬಿಐ ತನಿಖೆಗೆ ಮನವಿ: ರಮೇಶ್ ಜಾರಕಿಹೊಳಿ
ಮುಂದುವರೆದು, ಬಿಜೆಪಿಗೆ ಲಿಂಗಾಯತರ ಮೇಲೆ ನಿಜವಾದ ಪ್ರೇಮವೇ ಇಲ್ಲ, ಬಿಜೆಪಿ ಮೀಸಲಾತಿ ಹಂಚಿಕೆ ಮಾಡಿದ್ದರೂ ಕೂಡ ಇದು ಚುನಾವಣಾ ಪೂರ್ವದಲ್ಲಿಯೇ ಸಾಬೀತಾಯ್ತು. ಮೀಸಲಾತಿಗೆ ಸಂಬಂಧಿಸಿ 2ಬಿಯನ್ನೇ 2ಡಿಗೆ ಪರಿವರ್ತನೆ ಮಾಡಿಕೊಟ್ಟಿದ್ದರು. ಇದು ಹೇಗಿದೆ ಅಂದರೆ ಹಳೇ ವೈನ್ಅನ್ನು ಹೊಸ ಬಾಟಲಿಯಲ್ಲಿ ಕೊಟ್ಟಂತೆ ಆಗಿದೆ. ಹೀಗಾಗಿ ಇದರ ವಿರುದ್ಧ ಕೋರ್ಟ್‌ಗೆ ಕೂಡ ಹೋಗಲಾಗಿತ್ತು. ಆದರೆ ಮುಸ್ಲಿಂರ ಮೀಸಲಾತಿ ತೆಗೆದುಕೊಟ್ಟಿದ್ದಾರೆ. ಮೀಸಲಾತಿ ಪರವಾಗಿ ಕೇಳಲು ಸುಪ್ರಿಂಕೋರ್ಟ್ಗೆ ರಸೂಲ್ ಎನ್ನುವವರು ಹೋಗಿದ್ದರು.