ಕರ್ನಾಟಕ

karnataka

ETV Bharat / state

ಸ್ವಾಮೀಜಿ ಮದ್ಯ ಸೇವಿಸಿ ಅರೆ ಬೆತ್ತಲೆ ವಿಡಿಯೋ ವೈರಲ್ ಪ್ರಕರಣ: ಜೀವ ಬೆದರಿಕೆ ಆರೋಪ - mohan-swamiji-viral-video

ಸ್ವಾಮೀಜಿಯೊಬ್ಬರು ಕುಡಿದು ಅರೆ ಬೆತ್ತಲೆಯಾಗಿ ಬಿದ್ದಿರುವ ವಿಡಿಯೋ ವೈರಲ್ ಆದ ಪ್ರಕರಣ ಸಂಬಂಧ ಇಬ್ಬರು ವ್ಯಕ್ತಿಗಳಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.

mohan-swamiji-viral-video
ಜೀವ ಬೆದರಿಕೆ ಆರೋಪ

By

Published : May 7, 2020, 5:41 PM IST

ಹುಬ್ಬಳ್ಳಿ:ಸ್ವಾಮೀಜಿಯೊಬ್ಬರು ಕುಡಿದು ಅರೆ ಬೆತ್ತಲೆಯಾಗಿ ಬಿದ್ದಿರುವ ವಿಡಿಯೋ ವೈರಲ್ ಹಿನ್ನೆಲೆಯಲ್ಲಿ ಇಬ್ಬರಿಗೆ ಜೀವ ಬೆದರಿಕೆ ಕರೆಗಳು ಬಂದಿವೆ ಎಂಬ ಆರೋಪ ಕೇಳಿಬಂದಿದೆ.

ಜೀವ ಬೆದರಿಕೆ ಆರೋಪ

ಹುಬ್ಬಳ್ಳಿಯ ಅಯ್ಯಪ್ಪ ಸ್ವಾಮಿ ಭಕ್ತ ಸ್ವಾಮೀಜಿಯೊಬ್ಬರು ಮದ್ಯ ಸೇವನೆ ಮಾಡಿ ಅರೆಬೆತ್ತಲಾಗಿ ಮಲಗಿರುವ ವಿಡಿಯೋ ಒಂದು ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದರ ಬೆನ್ನಲ್ಲೇ ನಗರದ ಅಯ್ಯಪ್ಪ ಭಕ್ತರು ಗುರುಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದರಿಂದ ಕೋಪಗೊಂಡ ಸ್ವಾಮೀಜಿ ತಮ್ಮ ಹೆಸರು ಹಾಳುಮಾಡಲು ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟಿದ್ದಾರೆಂದು ಶಬರಿನಗರದ ನಿವಾಸಿಗಳಾದ ಶಂಕರ, ವಿಜಯ ಪೂಜಾರ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ನಮಗೆ ರಕ್ಷಣೆ ನೀಡಿ ಎಂದು ಮನವಿ ಮಾಡಿದ್ದಾರೆ.

ABOUT THE AUTHOR

...view details