ಕರ್ನಾಟಕ

karnataka

ETV Bharat / state

ಮಾಜಿ ಸಭಾಪತಿಗಳಿಂದ ಸಂಸದೀಯ ಕಾರ್ಯಕಲಾಪಗಳ ಅಣುಕು ಪ್ರದರ್ಶನ - ಸಂಸದೀಯ ಕಾರ್ಯಕಲಾಪಗಳ ಅಣುಕು ಪ್ರದರ್ಶನ ಕಾರ್ಯಕ್ರಮ

ಧಾರವಾಡದ ಪ್ರಜೆಂಟೇಷನ್ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸಂಸದೀಯ ಕಾರ್ಯಕಲಾಪಗಳ ಅಣುಕು ಪ್ರದರ್ಶನದ ಚಳಿಗಾಲ ಅಧಿವೇಶನದಲ್ಲಿ ವಿಧಾನ ಪರಿಷತ್‍ನ ಮಾಜಿ ಸಭಾಪತಿ, ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಭಾಗವಹಿಸಿ ಮಾದರಿ ಅಧಿವೇಶನ ನಡೆಸಿದರು.

Basavaraj horatti
ಬಸವರಾಜ ಹೊರಟ್ಟಿ

By

Published : Dec 6, 2019, 5:35 PM IST

ಧಾರವಾಡ: ವಿಧಾನ ಪರಿಷತ್‍ನ ಮಾಜಿ ಸಭಾಪತಿ ಬಸವರಾಜ್​ ಹೊರಟ್ಟಿ ಅವರು ನಗರದ ಪ್ರಜೆಂಟೇಷನ್ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸಂಸದೀಯ ಕಾರ್ಯ ಕಲಾಪಗಳ ಅಣುಕು ಪ್ರದರ್ಶನದ ಚಳಿಗಾಲ ಅಧಿವೇಶನವನ್ನು ಒಂದು ಗಂಟೆಗೂ ಹೆಚ್ಚು ಕಾಲ ಸ್ವತಃ ತಾವೇ ನಿರ್ವಹಿಸಿ, ಸರಳತೆ ಮೆರೆದರು.

ಸಂಸದೀಯ ಕಾರ್ಯಕಲಾಪಗಳ ಅಣುಕು ಪ್ರದರ್ಶನ

ಕಾರ್ಯಕ್ರಮ ಉದ್ಘಾಟಿಸಿದ ನಂತರ ಅವರು ಸಂಪ್ರದಾಯದಂತೆ ಉದ್ಘಾಟನಾ ಭಾಷಣ ಮಾಡದೇ ಸಭಾಪತಿಗಳ ಪೀಠದಲ್ಲಿ ಆಸೀನರಾಗಿ, ಸದನದ ಎಲ್ಲ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಆಡಳಿತ ಪಕ್ಷ ಹಾಗೂ ಪ್ರತಿಪಕ್ಷದ ಸದಸ್ಯರಿಗೆ ಪ್ರಶ್ನೋತ್ತರ ಪ್ರಕ್ರಿಯೆ ಮತ್ತು ಶಾಸನಸಭೆಗಳಲ್ಲಿ ನಿರ್ವಹಿಸುವ ನಿಯಮಗಳ ಕುರಿತು ತರಬೇತಿ ನೀಡಿದ್ರು.

ಅವರು ನಿರ್ವಹಿಸಿದ ಕಾರ್ಯಕಲಾಪಗಳಲ್ಲಿ ಚುಕ್ಕೆ ಗುರುತಿನ ಪ್ರಶ್ನೆ, ಚುಕ್ಕೆ ರಹಿತ ಪ್ರಶ್ನೆ, ಝೀರೊ ಅವರ್ ಕಲಾಪಗಳನ್ನು ನಡೆಸಲಾಯಿತು. ಮಹಿಳೆಯರಿಗೆ ಅನಗತ್ಯವಾಗಿ ಸಿಜೇರಿಯನ್​ ಮೂಲಕ ಹೆರಿಗೆ ಮಾಡಿಸುವುದು, ರಸ್ತೆ ದುರಸ್ತಿ, ವೈದ್ಯಕೀಯ ಕಾಲೇಜು ಮಂಜೂರಾತಿ, ವಿದ್ಯಾರ್ಥಿ ವೇತನದ ವಿಳಂಬ, ಮೀಸಲಾತಿ ಮುಂದುವರಿಕೆ, ಕಾರ್ಮಿಕರ ರಕ್ಷಣೆ, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಮುಂತಾದವುಗಳ ಕುರಿತು ಸದನದಲ್ಲಿ ಗಂಭೀರ ಚರ್ಚೆ ನಡೆಯಿತು.

ಜಿಲ್ಲಾ ಮಟ್ಟದ ಈ ಸ್ಪರ್ಧೆಯಲ್ಲಿ ಧಾರವಾಡ ಜಿಲ್ಲೆಯ ಏಳು ಶೈಕ್ಷಣಿಕ ತಾಲೂಕಿನ 70 ಕ್ಕೂ ಹೆಚ್ಚು ಪ್ರೌಢಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅಣುಕು ಸದನದಲ್ಲಿ ಭಾಗವಹಿಸಿದ್ದರು.

ABOUT THE AUTHOR

...view details