ಕರ್ನಾಟಕ

karnataka

ETV Bharat / state

ಆರು ಮಂದಿ ಮೊಬೈಲ್ ಕಳ್ಳರ ಬಂಧನ: 18 ಮೊಬೈಲ್​ ಫೋನ್​ ವಶಕ್ಕೆ - ಮೊಬೈಲ್​ ಕಳ್ಳರ ಬಂಧನ ಲೇಟೆಸ್ಟ್​ ಸುದ್ದಿ

ಮೊಬೈಲ್​ ಕಳ್ಳತನವನ್ನೇ ಕಾಯಕ ಮಾಡಿಕೊಂಡ 6 ಮಂದಿ ಮೊಬೈಲ್ ಫೋನ್​​​ ಚೋರರನ್ನು ಹುಬ್ಬಳ್ಳಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1.72 ಮೌಲ್ಯದ 18 ಮೊಬೈಲ್‌ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

mobiles  thieves arrests in hubli
ಆರು ಮಂದಿ ಮೊಬೈಲ್ ಕಳ್ಳರ ಬಂಧನ

By

Published : Jan 25, 2021, 3:51 PM IST

ಹುಬ್ಬಳ್ಳಿ: ನಗರದ ಬಸ್‌ ನಿಲ್ದಾಣ ಹಾಗೂ ಜನನಿಬಿಡ ಸ್ಥಳಗಳಲ್ಲಿ ಮೊಬೈಲ್ ಫೋನ್‌ಗಳನ್ನು ಕಳವು ಮಾಡುತ್ತಿದ್ದ ಆರು ಮಂದಿಯನ್ನು ಬಂಧಿಸುವಲ್ಲಿಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮನೋಜ ಗಾಯಕವಾಡ, ಮಂಜುನಾಥ ಜಾಧವ, ರೋಹಿತ ಜಾಧವ, ನಾಗೇಶ ಗೋಕಾಕ, ನಾಗರಾಜ ಮತ್ತಿಗಟ್ಟಿ ಹಾಗೂ ರವಿ ಗಬ್ಬೂರ ಬಂಧಿತರು. ಆರೋಪಿಗಳಿಂದ 1.72 ಲಕ್ಷ ರೂ. ಮೌಲ್ಯದ 18 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details