ಕರ್ನಾಟಕ

karnataka

ETV Bharat / state

ಪೌರಕಾರ್ಮಿಕರಿಗೆ ಸಂಚಾರಿ ವಿಶ್ರಾಂತಿ ಗೃಹ: ಪುರುಷ-ಮಹಿಳೆಯರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ - Mobile rest room opened for civilian workers

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕೆಲ ವಾರ್ಡ್​ಗಳಲ್ಲಿ ಮೊಬೈಲ್ ವಿಶ್ರಾಂತಿ ಗೃಹಗಳನ್ನು ಸ್ಥಾಪಿಸಲಾಗಿದೆ. ಇವುಗಳ ಬಗ್ಗೆ ಅಧ್ಯಯನ ಮಾಡಿರುವ ಹುಬ್ಬಳ್ಳಿ- ಧಾರವಾಡ ಪಾಲಿಕೆ ಅಧಿಕಾರಿಗಳು, ಸಂಚಾರಿ ವಿಶ್ರಾಂತಿ ಗೃಹಗಳು ಅತ್ಯಂತ ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.

mobile-rest-room-started-in-hubli-for-civilian-workers
ಪೌರ ಕಾರ್ಮಿಕರಿಗೆ ಸಂಚಾರಿ ವಿಶ್ರಾಂತಿ ಗೃಹ

By

Published : Mar 16, 2021, 4:58 PM IST

ಹುಬ್ಬಳ್ಳಿ:ಇಡೀ ಮಹಾನಗರದ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರಕಾರ್ಮಿಕರಿಗಾಗಿ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಸಂಚಾರಿ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲು ಹು-ಧಾ ಮಹಾನಗರ ಪಾಲಿಕೆ ಮುಂದಾಗಿದೆ.

ಪೌರಕಾರ್ಮಿಕರು ಬೆಳಗಿನ ಜಾವ ಸ್ವಚ್ಛತಾ ಕಾರ್ಯಕ್ಕೆ ಬಂದಾಗ ವಿಶ್ರಾಂತಿಗಾಗಿ ನಿಗದಿತ ಸ್ಥಳವಿಲ್ಲದೆ, ಎಲ್ಲಿ ಬೇಕೆಂದರಲ್ಲಿ ಕುಳಿತು, ನಿಂತು ಬೆಳಗಿನ ಉಪಾಹಾರ ಸೇವಿಸುತ್ತಾರೆ. ಅಲ್ಲದೆ ಮನೆಯಿಂದ ಬರುವಾಗ ಧರಿಸಿದ ಉಡುಪಿನಲ್ಲೇ ಕೆಲಸ ಸೇರಿದಂತೆ ಇದರಲ್ಲಿಯೇ ಉಪಾಹಾರವನ್ನೂ ಮುಗಿಸುತ್ತಾರೆ. ಅಲ್ಲದೆ ಕೊಂಚ ದಣಿವಾರಿಸಿಕೊಳ್ಳಬೇಕಾದರೂ ಯಾವುದಾದ್ರು ಮರದ ಕೆಳಗೋ, ಕಟ್ಟಡದ ನೆರಳನ್ನೋ ಹುಡುಕಿಕೊಳ್ಳಬೇಕಿದೆ. ಕೆಲವೆಡೆ ಇದು ಕೂಡ ಸಿಗುವುದಿಲ್ಲ. ಕುಡಿಯುವ ನೀರಿಗಾಗಿ ಮನೆ ಮನೆಗೆ ತಡಕಾಡುವ ಪರಿಸ್ಥಿತಿಯಿದೆ. ಹೀಗಾಗಿ ಮಹಾನಗರದ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪೌರಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಮಹಾನಗರ ಪಾಲಿಕೆ 15ನೇ ಹಣಕಾಸು ಆಯೋಗದ ಅನುದಾನದಡಿ ವಿಶ್ರಾಂತಿ ಗೃಹಗಳನ್ನು ನಿರ್ಮಾಣಕ್ಕೆ ಯೋಜನೆ ರೂಪಿಸಲು ಹೊರಟಿದೆ.

ಪೌರಕಾರ್ಮಿಕರಿಗೆ ಸಂಚಾರಿ ವಿಶ್ರಾಂತಿ ಗೃಹ ನಿರ್ಮಾಣಕ್ಕೆ ಮುಂದಾದ ಹು-ಧಾ ಪಾಲಿಕೆ

ಈ ವಿಶ್ರಾಂತಿ ಗೃಹಗಳು ಸುಲಭವಾಗಿ ಸ್ಥಳಾಂತರಿಸುವ ಮೊಬೈಲ್ ವ್ಯವಸ್ಥೆ ಹೊಂದಿವೆ. ಪುರುಷ ಹಾಗೂ ಮಹಿಳೆಯರಿಗೆ ಇಲ್ಲಿ ಪ್ರತ್ಯೇಕ ವ್ಯವಸ್ಥೆಯಿರುತ್ತದೆ. ಪ್ರತ್ಯೇಕ ಶೌಚಾಲಯಗಳು, ಜೊತೆಗೆ ಶುಚಿಯಾಗಲು ನೀರು ಹಾಗೂ ಪೂರಕ ವ್ಯವಸ್ಥೆ ಇರಲಿದ್ದು, ಈ ಕೊಠಡಿಯಲ್ಲೇ ಬೆಳಗಿನ ಉಪಾಹಾರ ಮಾಡಲು ವ್ಯವಸ್ಥೆ ಕಲ್ಪಿಸುತ್ತಿರುವುದು ವಿಶೇಷವಾಗಿದೆ. ಸ್ವಚ್ಛತಾ ಕೆಲಸಕ್ಕೆ ಬಳಸುವ ಸಾಮಗ್ರಿಗಳನ್ನು ಇಲ್ಲಿಯೇ ಇಡಬಹುದಾಗಿದ್ದು, ಇದರಲ್ಲಿ ಪ್ರಮುಖವಾಗಿ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶ ಹೊಂದಿರುವುದು ಪೌರಕಾರ್ಮಿಕರ ಮುಖದಲ್ಲಿ ಸಂತಸ ಮೂಡಿಸಿದೆ.

ಓದಿ:‘ಯಾವ ಕ್ರೀಡೆ ಅಂತ ಬಿಡಿಸಿ ಹೇಳ್ರಿ’: ವಿಧಾನಸಭೆ ಕಲಾಪದಲ್ಲಿ ಸಿಡಿಯದ್ದೇ ಹಾಸ್ಯ

ಈಗಾಗಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕೆಲ ವಾರ್ಡ್​ಗಳಲ್ಲಿ ಮೊಬೈಲ್ ವಿಶ್ರಾಂತಿ ಗೃಹಗಳನ್ನು ಸ್ಥಾಪಿಸಲಾಗಿದೆ. ಇವುಗಳ ಬಗ್ಗೆ ಅಧ್ಯಯನ ಮಾಡಿರುವ ಹುಬ್ಬಳ್ಳಿ-ಧಾರವಾಡ ಪಾಲಿಕೆ ಅಧಿಕಾರಿಗಳು, ಸಂಚಾರಿ ವಿಶ್ರಾಂತಿ ಗೃಹಗಳು ಅತ್ಯಂತ ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.

For All Latest Updates

TAGGED:

ABOUT THE AUTHOR

...view details