ಹುಬ್ಬಳ್ಳಿ :ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮಕ್ಕೆ ನಮ್ಮ ಬಿಜೆಪಿ ಪಾರ್ಟಿಯಿಂದ ನನ್ನನ್ನು ಕರೆದಿಲ್ಲ. ಎಲ್ಲ ಸರ್ಕಾರಿ ಕಾರ್ಯಕ್ರಮಗಳಿಗೆ ನನ್ನನ್ನು ಕರೆಯುತ್ತಾರೆ. ಪ್ರೋಟೋಕಾಲ್ ಪ್ರಕಾರ ಕರೆಯಬೇಕು. ನನ್ನ ಅಧಿಕಾರಾವಧಿ ಇನ್ನು 4 ವರ್ಷವಿದೆ. ಇದೊಂದೇ ಕಾರ್ಯಕ್ರಮ ಅಲ್ಲ, ನಾಲ್ಕೈದು ಕಾರ್ಯಕ್ರಮಕ್ಕೆ ಕಡೆಗಣನೆ ಮಾಡಿದ್ದಾರೆ ಎಂದು ಎಂಎಲ್ಸಿ ಪ್ರದೀಪ್ ಶೆಟ್ಟರ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಪಾರ್ಟಿ ಕಡೆಯಿಂದ ಏನೋ ಆಗಿದೆ ಎಂದು ಕೇಂದ್ರ ಸಚಿವರು ನನ್ನ ಜೊತೆ ಮಾತನಾಡಿದ್ದಾರೆ. ಈ ತರಹ ಆಗಬಾರದು ಎಂದು ನಾನು ಹೇಳಿದ್ದೇನೆ. ಚುನಾವಣೆ ಆದ ಮೇಲೆ ಬೇರೆ ಪಾರ್ಟಿ ಸೇರುವುದಿಲ್ಲ. ಬಿಜೆಪಿಯಲ್ಲೇ ಇರುತ್ತೇನೆ ಎಂದು ಹೇಳಿದ್ದೇನೆ. ಆದರೇ ನಮ್ಮ ಪಾರ್ಟಿಯವರೇ ನನ್ನನ್ನು ಅವಾಯ್ಡ್ ಮಾಡುತ್ತಿದ್ದಾರೆ. ಹೀಗಾಗಿ ನಾವು ಮನೆಯಲ್ಲಿ ಇರುವುದು ಸರಿ ಎಂದು ಪ್ರದೀಪ್ ಶೆಟ್ಟರ್ ಹೇಳಿದ್ದಾರೆ.
ನಮ್ಮಲ್ಲಿ ಮೊದಲೇ ಲಿಂಗಾಯತ ನಾಯಕರ ಅಭಾವ ಉಂಟಾಗಿದ್ದು, ಯಾರೊಬ್ಬ ನಾಯಕರು ಇಲ್ಲ. ಬಿಜೆಪಿಯಲ್ಲಿ ಲಿಂಗಾಯತರನ್ನು ತುಳಿಯುತ್ತಿದ್ದಾರೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಏಕೆಂದರೆ ಬಿಜೆಪಿ ಎಂದರೇ ಲಿಂಗಾಯತರು ಎಂದಿತ್ತು. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಇನ್ನೂ ಹಲವು ನಾಯಕರು ಇದ್ದರು. ಇದೀಗ ಫ್ರಂಟ್ ಲೈನ್ ಲೀಡರ್ಸ್ ಕ್ರಮೇಣ ಪಾರ್ಟಿ ಬಿಟ್ಟು ಹೋಗುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದರು. ಬಿಜೆಪಿಯಲ್ಲಿ ಲಿಂಗಾಯತ ನಾಯಕರಿಗೆ ನಾಕಯತ್ವ ಸ್ಥಾನ ಕೊಡಬೇಕು.