ಹುಬ್ಬಳ್ಳಿ :ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ಬಿಜೆಪಿ 39 ಸ್ಥಾನ ಗಳಿಸಿ ಅಧಿಕಾರ ಹಿಡಿಯಲು ಮುಂದಾಗಿದೆ. ಈ ನಡುವೆ ಬಸವನ ಬಾಗೇವಾಡಿ ಕೈ ಶಾಸಕರೊಬ್ಬರು ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಸದಸ್ಯರಿಗೆ ಬಿಗ್ ಆಫರ್ ನೀಡಿದ್ದಾರೆ.
ನಗರದಲ್ಲಿ ನಡೆದ ಪಾಲಿಕೆ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಮಾತನಾಡಿ, ನಾನು ಬಿಜಾಪುರದಲ್ಲಿದ್ದಾಗ ನಗರ ಸಭೆ ಅಧ್ಯಕ್ಷನಾಗಿದ್ದೆ. ನಾನು ಜನತಾದಳದಲ್ಲಿದ್ದಾಗ ಇಬ್ಬರೆ ಗೆಲುವು ಸಾಧಿಸಿದ್ವಿ. ಆದರೆ, ಕಾಂಗ್ರೆಸ್ನಿಂದ 24 ಜನರು ಗೆದ್ದಿದ್ದರು. ಆಗ ನಾನೇ ಅವರನ್ನು ಕರೆತಂದು ಅಧ್ಯಕ್ಷ ಆಗಿದ್ದೆ ಎಂದರು.