ಹುಬ್ಬಳ್ಳಿ: ತಡವಾಗಿ ಯಾಕೆ ಬಂದ್ರಿ ಎಂದು ಕಲಘಟಗಿ ಶಾಸಕ ಸಿ ಎಂ ನಿಂಬಣ್ಣವರ್ ಅವರನ್ನು ಸಂತ್ರಸ್ತರು ಕೇಳಿದ್ದಕ್ಕೆ, ಶಾಸಕರು ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ತಡವಾಗಿ ಯಾಕೆ ಬಂದ್ರಿ ಅಂತಾ ಪ್ರಶ್ನೆ ಮಾಡಿದ್ರೆ ಶಾಸಕರು ಹೀಗ್ ಅನ್ನೋದಾ? - karnataka flood
ಸಂತ್ರಸ್ತರ ಕೇಂದ್ರಕ್ಕೆ ಕಲಘಟಗಿ ಶಾಸಕ ಸಿ ಎಂ ನಿಂಬಣ್ಣನವರ್ ಭೇಟಿ ನೀಡಿದ್ದರು. ಈ ವೇಳೆ ಸಂತ್ರಸ್ತರು, ಶಾಸಕರಿಗೆ ತಡವಾಗಿ ಯಾಕೆ ಬಂದ್ರಿ ಎಂದು ಕೇಳಿದ್ದಾರೆ. ಇದರಿಂದ ಕುಪಿತಗೊಂಡ ಶಾಸಕರು, ನಿಮಗೆ ಏನು ಬೇಕು ಅದನ್ನ ಕೇಳಿ.. ಬರೋದು ಬಿಡೋದು ನನಗೆ ಬಿಟ್ಟ ವಿಚಾರ ಎಂದು ಜನರ ಜೊತೆ ಕೋಪದಿಂದ ವರ್ತಿಸಿದ್ದಾರೆ ಎಂದು ಆರೋಪ ಕೇಳಿಬಂದಿದೆ.

ಧಾರವಾಡ ಜಿಲ್ಲೆ ಅಳ್ನಾವರ ಪಟ್ಟಣದಲ್ಲಿನ ಸಂತ್ರಸ್ತರ ಕೇಂದ್ರಕ್ಕೆ ಶಾಸಕ ನಿಂಬಣ್ಣನವರ್ ಭೇಟಿ ನೀಡಿದ್ದರು. ಈ ವೇಳೆ ಸಂತ್ರಸ್ತರು, ಶಾಸಕರಿಗೆ ತಡವಾಗಿ ಯಾಕೆ ಬಂದ್ರಿ ಎಂದು ಕೇಳಿದ್ದಾರೆ. ಇದರಿಂದ ಕುಪಿತಗೊಂಡ ಶಾಸಕರು, ನಿಮಗೆ ಏನು ಬೇಕು ಅದನ್ನ ಕೇಳಿ.. ಬರೋದು ಬಿಡೋದು ನನಗೆ ಬಿಟ್ಟ ವಿಚಾರ ಎಂದು ಜನರ ಜೊತೆ ಕೋಪದಿಂದ ವರ್ತಿಸಿದ್ದಾರೆ ಎನ್ನಲಾಗ್ತಿದೆ.
ಭೀಕರ ಮಳೆ, ನೆರೆ ಹಾವಳಿ ಬಂದು ಒಂದು ವಾರ ಆಯಿತು. ಈಗ್ಯಾಕೆ ಬಂದ್ರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಎಲೆಕ್ಷನ್ ಆದ ಮೇಲೆ ಒಮ್ಮೆಯೂ ನಮ್ಮ ಗ್ರಾಮಕ್ಕೆ ಭೇಟಿ ನೀಡಿಲ್ಲ. ಈಗ ಎಲ್ಲಾ ಮುಗಿದ ಮೇಲೆ ಬಂದಿದ್ದೀರಿ ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ತಮ್ಮ ಬೆಂಬಲಿಗರ ಜೊತೆ ಶಾಸಕ ನಿಂಬಣ್ಣನವರ್ ವಾಪಸಾಗಿದ್ದಾರೆ.