ಕಲಘಟಗಿ:ತಾಲೂಕಿನಲ್ಲಿನ ರೈತರ ಕೃಷಿಗಾಗಿ ಹಗಲಿನಲ್ಲಿ ಮೂರು ಗಂಟೆ ವಿದ್ಯುತ್ ಪೂರೈಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಶಾಸಕ ಸಿಎಂ ನಿಂಬಣ್ಣವರ ಸೂಚಿಸಿದ್ದಾರೆ.
ಕೃಷಿಗೆ ಹಗಲು ಮೂರು ಗಂಟೆ ವಿದ್ಯುತ್ ಪೂರೈಸಿ: ಹೆಸ್ಕಾಂ ಅಧಿಕಾರಿಗಳಿಗೆ ಶಾಸಕ ನಿಂಬಣ್ಣವರ ಸೂಚನೆ - 3 hours power supply to agriculture
ಸ್ಥಳೀಯ ತಾ.ಪಂ. ಸಭಾ ಭವನದಲ್ಲಿ ಶುಕ್ರವಾರ ಹೆಸ್ಕಾಂ ಅಧಿಕಾರಿಗಳ ಸಭೆಯಲ್ಲಿ ವಿದ್ಯುತ್ ಸಮಸ್ಯೆ ಕುರಿತು ಪರಿಹಾರ ಕಂಡುಕೊಳ್ಳಲು ಸೂಚಿಸಿ, ಟಿಸಿಗಳು ಸುಟ್ಟರೆ ಶೀಘ್ರ ಟಿಸಿ ಅಳವಡಿಸಬೇಕೆಂದು ಅಧಿಕಾರಿಗಳಿಗೆ ಶಾಸಕ ನಿಂಬಣ್ಣವರ ತಿಳಿಸಿದರು.
ಸ್ಥಳೀಯ ತಾ.ಪಂ. ಸಭಾ ಭವನದಲ್ಲಿ ಶುಕ್ರವಾರ ಹೆಸ್ಕಾಂ ಅಧಿಕಾರಿಗಳ ಸಭೆಯಲ್ಲಿ ವಿದ್ಯುತ್ ಸಮಸ್ಯೆ ಕುರಿತು ಪರಿಹಾರ ಕಂಡುಕೊಳ್ಳಲು ಸೂಚಿಸಿ ಮಾತನಾಡಿ, ಟಿಸಿಗಳು ಸುಟ್ಟರೆ ಶೀಘ್ರ ಟಿಸಿ ಅಳವಡಿಸುಬೇಕೆಂದು ಅಧಿಕಾರಿಗಳಿಗೆ ನಿಂಬಣ್ಣವರ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ತಾಲೂಕಿನಲ್ಲಿ ಅನಧಿಕೃತ ಕೊಳವೆ ಬಾವಿಗಳ ಸಂಪರ್ಕ ಹೆಚ್ಚಾಗಿದ್ದು, ಇದರಿಂದ ಟಿಸಿ ಸುಡುತ್ತಿವೆ ಎಂದು ತಿಳಿಸಿದರು. ಅಧಿಕೃತವಾಗಿ ಕೊಳವೆಬಾವಿ ಪರವಾನಿ ಪಡೆಯಲು ರೈತರಿಗೆ ಸೂಚಿಸಿ ಎಂದು ಶಾಸಕರು ನಿಂಬಣ್ಣವರ ಹೇಳಿದ್ದಾರೆ.
ತಾ.ಪಂ. ಅಧ್ಯಕ್ಷೆ ಸುನೀತಾ ಮ್ಯಾಗಿನಮನಿ, ಸ್ಥಾಯಿ ಸಮಿತಿ ಅಧ್ಯಕ್ಷ ಈರಯ್ಯ ಸಿದ್ಧಾಪೂರಮಠ, ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ಶಾಸಕರ ಆಪ್ತ ಸಹಾಯಕ ಮಾರುತಿ ಹಂಚಿನಮನಿ, ತಾ.ಪಂ. ಇಒ ಎಂಎಸ್ ಮೇಟಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.