ಕರ್ನಾಟಕ

karnataka

ETV Bharat / state

ವಿಶ್ವಕಪ್ ಗೆಲುವಿಗಾಗಿ ಟೀಂ ಇಂಡಿಯಾಗೆ ಶಾಸಕ ಮಹೇಶ ಟೆಂಗಿನಕಾಯಿ ಶುಭ ಹಾರೈಕೆ - World Cup 2023

ವಿಶ್ವಕಪ್ 2023ರ ಗೆಲುವಿಗಾಗಿ ಟೀಂ ಇಂಡಿಯಾಗೆ ಶಾಸಕ ಮಹೇಶ ಟೆಂಗಿನಕಾಯಿ ಶುಭ ಹಾರೈಸಿದರು.

MLA Mahesh Tenginakai
ವಿಶ್ವಕಪ್ ಗೆಲುವಿಗಾಗಿ ಟೀಂ ಇಂಡಿಯಾಗೆ ಶಾಸಕ ಮಹೇಶ ಟೆಂಗಿನಕಾಯಿ ಹಾರೈಕೆ

By ETV Bharat Karnataka Team

Published : Nov 18, 2023, 2:08 PM IST

Updated : Nov 18, 2023, 2:35 PM IST

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿದರು.

ಹುಬ್ಬಳ್ಳಿ:''ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತ ಗೆಲವು ಸಾಧಿಸಲಿ'' ಎಂದು ಶಾಸಕ ಮಹೇಶ ಟೆಂಗಿನಕಾರಿಯಿಂದ ಶುಭ ಹಾರೈಕೆ. ನಗರದ ನೆಹರು ಮೈದಾನಲ್ಲಿ ಅಭಿಮಾನಿಗಳೊಂದಿಗೆ ಕ್ರಿಕೆಟ್ ಆಡುವ ಮೂಲಕ ಭಾರತ ತಂಡಕ್ಕೆ ಶುಭ ಕೋರಿದರು.

ನಾಳೆ ಆಸ್ಟ್ರೇಲಿಯಾ vs ಭಾರತ ನಡುವೇ ಫೈನಲ್ ಪಂದ್ಯ ನಡೆಯಲಿದೆ. ಈ‌ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಲಿದೆ. ಈಗಾಗಲೇ 10 ಪಂದ್ಯಗಳಲ್ಲಿ ಭಾರತ ಗೆದ್ದಿದೆ. ನಾಳಿನ ಪಂದ್ಯದಲ್ಲಿ ಸಹ ಭಾರತ ಗೆಲ್ಲುತ್ತದೆ. ರೋಹಿತ್ ಶರ್ಮಾ ನೇತೃತ್ವದಲ್ಲಿನ ತಂಡ ಒಳ್ಳೆಯ ಆಟ ಆಡಲಿದೆ. ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲಿಯೂ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಬೌಲಿಂಗ್, ಬ್ಯಾಟಿಂಗ್ ಹಾಗೂ ಕೀಪಿಂಗ್ ನಲ್ಲಿ ಅದ್ಭುತವಾದ ಆಟವನ್ನು ಆಡುತ್ತಿದ್ದು, ನಾಳೆ ವಿಶ್ವಕಪ್ ಕಿರೀಟವನ್ನು ಭಾರತ ಧರಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ವಿರೋಧ ಪಕ್ಷದ ನಾಯಕನ ಆಯ್ಕೆಗೆ ಶಾಸಕರ ಅಪಸ್ವರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ಬಿಜೆಪಿ ಶಾಸಕರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಭಾರತೀಯ ಜನತಾ ಪಕ್ಷದ ಹಿರಿಯ ಕಿರಿಯ ಶಾಸಕರ ಅಭಿಪ್ರಾಯ ಸಂಗ್ರಹಿಸಿ ವಿರೋಧ ಪಕ್ಷದ ನಾಯಕರ ಆಯ್ಕೆ ಮಾಡಲಾಗಿದೆ. ಬೆಳಗ್ಗೆ ಶಾಸಕರನ್ನು ಪ್ರತ್ಯೇಕವಾಗಿ ಮಾತನಾಡಿಸಲಾಗಿದೆ. ವೀಕ್ಷಕರಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ ಗೌತಮ ಆಗಮಿಸಿದ್ದರು.

ಯಾವುದೇ ಭಿನ್ನಾಭಿಪ್ರಾಯ ಬರದಂತೆ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. ಶಾಸಕರ ಅಭಿಪ್ರಾಯ ಸಂಗ್ರಹಿಸಿ ಕೇಂದ್ರದ ಹಿರಿಯ ನಾಯಕರಿಗೆ ರವಾನೆ ಮಾಡಲಾಗಿದೆ. ವಿರೋಧ ಪಕ್ಷದ ನಾಯಕನ ಆಯ್ಕೆ ಮೊದಲು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಷಯ ಮಂಡನೆ ಮಾಡಿದರು. ಎಲ್ಲ ಶಾಸಕರು ಇದಕ್ಕೆ ವಿರೋಧ ಮಾಡದೇ ಅನುಮೋದನೆ ನೀಡಿದರು. ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಇದರೊಂದಿಗೆ ಹಿರಿಯ ಶಾಸಕರಾದ ಆರ್ ಅಶೋಕ್​ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು. ಸತತವಾಗಿ ಏಳು ಸಲ ಶಾಸಕರಾಗಿ ಆಯ್ಕೆಯಾದವರು. ಹಿರಿಯ ಶಾಸಕರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ನಾಯಕರಾಗಿದ್ದು, ಆರ್. ಅಶೋಕ್​ ನೇತೃತ್ವದಲ್ಲಿ ರಾಜ್ಯದ ಆಡಳಿತ ವೈಖರಿ ಕುರಿತು ಪ್ರಶ್ನೆ ಮಾಡಲಾಗುವುದು. ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಯಾವುದೇ ಜನಪರ ಕೆಲಸ ಆಗುತ್ತಿಲ್ಲ. ಡಿಸೆಂಬರ್ 4 ರಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಸಮರ್ಥವಾಗಿ ಮಾತನಾಡುತ್ತೇವೆ. ಯಾವುದೇ ರೀತಿಯ ಸರ್ಕಾರದ ಪರ ಸಾಫ್ಟ್ ಕಾರ್ನರ್ ಇಲ್ಲ'' ಎಂದು ತಿಳಿಸಿದರು.

ಇದನ್ನೂ ಓದಿ:ವಿಶ್ವಕಪ್ ಫೈನಲ್​ ಪಂದ್ಯ: ಮಣ್ಣಿನಲ್ಲಿ ಕಲಾಕೃತಿ ರಚಿಸಿ ಶುಭ ಹಾರೈಸಿದ ಧಾರವಾಡದ ಕಲಾವಿದ

Last Updated : Nov 18, 2023, 2:35 PM IST

ABOUT THE AUTHOR

...view details