ಹುಬ್ಬಳ್ಳಿ :ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಕೇವಲ ಪಕ್ಷದ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಪಕ್ಷ ಯಾವುದೇ ಸ್ಥಾನ ಕೊಟ್ಟರೂ ಅದನ್ನು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಯಾವಾಗ ಸ್ಫೋಟ ಮಾಡ್ಬೇಕೋ ಆವಾಗ ಮಾಡ್ತೀನಿ : ಶಾಸಕ ಯತ್ನಾಳ್ - ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದ ಬಸನಗೌಡ ಪಾಟೀಲ್
ನಾನು ಯಾವಾಗಲೂ ಕೂಲ್ ಇರ್ತೀನಿ. ಯಾವಾಗ ಸ್ಫೋಟ ಮಾಡಬೇಕೋ ಆವಾಗ ಮಾಡ್ತೀನಿ..
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರದ ಆಸೆ ಇಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ. ನಾನು ಯಾವಾಗಲೂ ಕೂಲ್ ಇರ್ತೀನಿ. ಯಾವಾಗ ಸ್ಫೋಟ ಮಾಡಬೇಕೋ ಆವಾಗ ಮಾಡ್ತೀನಿ ಎನ್ನುವ ಮೂಲಕ ರಾಜಕೀಯ ಸಂಚಲನದ ಸೃಷ್ಟಿಯ ಬಗ್ಗೆ ಸುಳಿವು ನೀಡಿದರು.
ಓದಿ:ಕೊರಗ ಜನಾಂಗದ ಮೇಲೆ ಹಲ್ಲೆ ಪ್ರಕರಣ.. ಪಿಎಸ್ಐ ಅಮಾನತು : ಸಚಿವ ಕೋಟ ಸ್ಪಷ್ಟನೆ
TAGGED:
BJP State Secretary meeting