ಕರ್ನಾಟಕ

karnataka

ETV Bharat / state

ಉ.ಕರ್ನಾಟಕದ ಧ್ವನಿಯಾಗಿ ಪಕ್ಷ ನನಗೆ ವಿಪಕ್ಷ ಉಪನಾಯಕನ ಸ್ಥಾನ ನೀಡಿದೆ: ಬೆಲ್ಲದ್ - ಈಟಿವಿ ಭಾರತ ಕರ್ನಾಟಕ

ಜನರ ಆಶೋತ್ತರಗಳಿಗೆ ಧ್ವನಿಯಾಗಿ, ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುವೆ ಎಂದು ನೂತನ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ತಿಳಿಸಿದ್ದಾರೆ.

Etv Bharatmla-arvinda-bellad-reaction-on-electing-as-a-deputy-opposition-leader
ಉ.ಕರ್ನಾಟಕದ ಧ್ವನಿಯಾಗಿ ಪಕ್ಷ ನನಗೆ ವಿಪಕ್ಷದ ಉಪನಾಯಕನ ಸ್ಥಾನ ನೀಡಿದೆ: ಅರವಿಂದ ಬೆಲ್ಲದ್

By ETV Bharat Karnataka Team

Published : Dec 25, 2023, 8:03 PM IST

Updated : Dec 25, 2023, 8:11 PM IST

ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಪ್ರತಿಕ್ರಿಯೆ

ಧಾರವಾಡ:"ಉತ್ತರ ಕರ್ನಾಟಕದ ಧ್ವನಿಯಾಗಿ ಪಕ್ಷ ನನಗೆ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕನ ಸ್ಥಾನ ನೀಡಿದೆ. ಪಕ್ಷದ ಎಲ್ಲ ನಾಯಕರಿಗೆ ವಂದನೆ ಸಲ್ಲಿಸುತ್ತೇನೆ" ಎಂದು ಶಾಸಕ ಅರವಿಂದ ಬೆಲ್ಲದ್​ ಹೇಳಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಪಕ್ಷ ನನ್ನನ್ನು ನಂಬಿ ಜವಾಬ್ದಾರಿ ಕೊಟ್ಟಿದೆ. ಜನರ ಆಶೋತ್ತರಗಳಿಗೆ ಧ್ವನಿಯಾಗಿ, ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುವೆ. ಕಾರ್ಯಕರ್ತರ ಶ್ರಮದಿಂದ ಈ ಜವಾಬ್ದಾರಿ ಲಭಿಸಿದೆ" ಎಂದರು.

ಅಸಮಾಧಾನ ಶಮನಕ್ಕೆ ಸ್ಥಾನ ಕೊಟ್ಟರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಆ ವಿಷಯವೇ ಬೇರೆ, ಈ ವಿಷಯವೇ ಬೇರೆ. ಇವತ್ತು ವಿರೋಧ ಪಕ್ಷದಲ್ಲಿದ್ದು ಸರ್ಕಾರದ ಕೆಲಸ ಸರಿಯಾಗಿ ಮಾಡಿಸುವುದು ನಮ್ಮ ಜವಾಬ್ದಾರಿ. ವಿರೋಧ ಪಕ್ಷದ ಧುರೀಣರಾಗಿ ಆರ್.ಅಶೋಕ್​ ಇದ್ದಾರೆ. ಪಕ್ಷದ ಅಧ್ಯಕ್ಷರಾಗಿ ವಿಜಯೇಂದ್ರ ಇದ್ದಾರೆ" ಎಂದರು.

ಯತ್ನಾಳ್‌ ಅಸಮಾಧಾನ ವಿಚಾರವಾಗಿ ಮಾತನಾಡಿ, "ಯತ್ನಾಳ್‌ ಅತ್ಯಂತ ಜನಪ್ರಿಯ ನಾಯಕರು. ಹಿಂದುತ್ವದ ಪ್ರತಿಪಾದಕರು. ಅವರ ಮೇಲೆ ಜನರ ಪ್ರೀತಿ ಇದೆ. ಆದರೆ ಅವರಿಗೆ ಸ್ಥಾನ ಕೊಟ್ಟಿಲ್ಲ. ಆದರೆ ಮುಂದೆ ಒಳ್ಳೆಯ ಸ್ಥಾನ ಕೊಡುವರೆಂಬ ಭರವಸೆ ಇದೆ. ಅವರಿಗೆ ಪಕ್ಷ ಉತ್ತಮ ಸ್ಥಾನ ಕೊಡುತ್ತದೆ. ಅವರನ್ನು ಯಾರೂ ಕಡೆಗಣನೆ ಮಾಡುತ್ತಿಲ್ಲ" ಎಂದು ತಿಳಿಸಿದರು.

ರೈತರ ಬಗ್ಗೆ ಸಚಿವ ಶಿವಾನಂದ ಪಾಟೀಲರ ಹೇಳಿಕೆ ವಿಚಾರವಾಗಿ ಮಾತನಾಡಿ, "ರೈತರ ಬಗ್ಗೆ ಮಾತನಾಡಿರುವುದು ಬಹಳ ದುಃಖ ಮತ್ತು ವಿಚಿತ್ರ ಅನಿಸಿತು. ಏಕೆಂದರೆ ಅವರು ವಿಜಯಪುರ ಜಿಲ್ಲೆಯ ಒಬ್ಬ ದೊಡ್ಡ ನಾಯಕ. ವಿಜಯಪುರ, ಬಾಗಲಕೋಟೆ ಜಿಲ್ಲೆ ಈಗ ನೀರಾವರಿ ಪ್ರದೇಶಗಳಾಗಿವೆ. ರಾಜ್ಯದಲ್ಲಿ ಅತ್ಯಂತ ಬರಗಾಲಪೀಡಿತ ಜಿಲ್ಲೆ ಅಂದರೆ ಅದು ವಿಜಯಪುರ. ಆ ಜಿಲ್ಲೆಯ ನಾಯಕರಾದವರಿಗೆ ಬರ ಪರಿಸ್ಥಿತಿ ಬಗ್ಗೆ ಗೊತ್ತಿರುತ್ತದೆ" ಎಂದರು.

"ರೈತರ ದುಃಖ ಮತ್ತು ಬರಗಾಲದ ಸಂಕಷ್ಟದ ಬಗ್ಗೆ ಅವಹೇಳಕಾರಿಯಾಗಿ ಶಿವಾನಂದ ಪಾಟೀಲರು ಮಾತನಾಡಿದ್ದಾರೆ. ಇದು ಕಾಂಗ್ರೆಸ್​ ಮನಸ್ಥಿತಿ ತೋರಿಸುತ್ತದೆ. ಹಿಂದಿನ ಸರ್ಕಾರಾವಧಿಯಲ್ಲಿ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ರೈತರಿಗೆ ನೀಡುತ್ತಿದ್ದ 4 ಸಾವಿರ ಸಹಾಯಧನವನ್ನು ಸಿಎಂ ಸಿದ್ದರಾಮಯ್ಯ ನಿಲ್ಲಿಸಿದರು. ರೈತರಿಗೆ ಕೊಡುತ್ತಿದ್ದ ಹಣವನ್ನು ಕಿತ್ತುಕೊಂಡಿದ್ದೇವೆ ಎಂಬ ಬಗ್ಗೆ ಇವರಿಗೆ ಯಾವುದೇ ಕಳಕಳಿ ಇಲ್ಲ. ಕುಚೇಷ್ಟೆ ಮಾಡುತ್ತಿರುವ ಇವರಿಗೆ ಆ ಸ್ಥಾನದಲ್ಲಿ ಇರಲು ಯೋಗ್ಯರಲ್ಲ. ಕೊಡಲೇ ಮುಖ್ಯಮಂತ್ರಿಗಳು ಮತ್ತು ಅವರ ಪಕ್ಷದ ಅಧ್ಯಕ್ಷರು ಸಚಿವ ಶಿವಾನಂದ ಪಾಟೀಲರಿಂದ ರಾಜೀನಾಮೆ ಪಡೆದುಕೊಳ್ಳಬೇಕು. ರೈತರ ಮನಸ್ಸಿಗೆ ನೋವು ಮಾಡಿದ್ದಕ್ಕೆ ಮುಖ್ಯಮಂತ್ರಿಗಳು ಸಹ ಕ್ಷಮೆಯಾಚಿಸಬೇಕು" ಎಂದು ಆಗ್ರಹಿಸಿದರು.

ಬಿಜೆಪಿ ಕಾರ್ಯಕರ್ತರು ನೂತನ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್​ಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.

ಇದನ್ನೂ ಓದಿ:ಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ; ಬೆಲ್ಲದ್​ಗೆ ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಸ್ಥಾನ

Last Updated : Dec 25, 2023, 8:11 PM IST

ABOUT THE AUTHOR

...view details