ಹುಬ್ಬಳ್ಳಿ:ಡಿ.5ರಂದು ಕರ್ನಾಟಕ ಬಂದ್ ಕರೆ ನೀಡಿದವರು ರೋಲ್ಕಾಲ್ ಹೋರಾಟಗಾರರು. ಯಾವುದೋ ರೀತಿಯಲ್ಲಿ ಸುದ್ದಿಯಲ್ಲಿ ಇರಬೇಕು ಎಂಬ ಉದ್ದೇಶದಿಂದ ಈ ರೀತಿ ವಿರೋಧ ಮಾಡುತ್ತಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ಅವರು ಕನ್ನಡ ಪರ ಹೋರಾಟಗಾರ ವಿರುದ್ಧ ಗುಡುಗಿದರು.
ಡಿ.5ಕ್ಕೆ ಕರ್ನಾಟಕ ಬಂದ್ ಮಾಡುವವರು ರೋಲ್ಕಾಲ್ ಹೋರಾಟಗಾರರು: ಅರವಿಂದ ಬೆಲ್ಲದ ಕಿಡಿ - December 5th Karnataka bandh
ವಿರೋಧ ಮಾಡುವವರಿಗೆ ಉದ್ಯೋಗವಿಲ್ಲ. ಅವರಿಗೆ ಸ್ಥಾನಮಾನವಿಲ್ಲ. ಬಂದ್ ಕರೆ ಕೊಟ್ಟವರೆಲ್ಲ, ರೋಲ್ಕಾಲ್ ಹೋರಾಟಗಾರರು ಅಷ್ಟೇ. ಕನ್ನಡದ ಹೆಸರನ್ನು ಕೆಡಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ಕಿಡಿಕಾರಿದ್ದಾರೆ.
ಶಾಸಕ ಅರವಿಂದ ಬೆಲ್ಲದ
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಗೊತ್ತಿದ್ದೂ ಗೊತ್ತಿದ್ದೂ ಹೀಗೆ ಮಾಡುತ್ತಾರೆ. ಮರಾಠ ಸಮಾಜದವರು ಸಹ ನಮ್ಮ ಕನ್ನಡಿಗರೇ. ಮರಾಠ ನಿಗಮ ಸ್ಥಾಪನೆಗೆ ನನ್ನ ಸ್ವಾಗತವಿದೆ ಎಂದರು.
ವಿರೋಧ ಮಾಡುವವರಿಗೆ ಉದ್ಯೋಗವಿಲ್ಲ, ಅವರಿಗೆ ಸ್ಥಾನಮಾನವೂ ಇಲ್ಲ. ಬಂದ್ ಕರೆ ಕೊಟ್ಟವರೆಲ್ಲ ರೋಲ್ಕಾಲ್ ಹೋರಾಟಗಾರರಷ್ಟೇ ಶಾಸಕ ಬೆಲ್ಲದ ಕಿಡಿಕಾರಿದರು.
Last Updated : Nov 24, 2020, 2:49 PM IST