ಧಾರವಾಡ:ಅಗತ್ಯ ವಸ್ತುಗಳಲ್ಲಿ ಮದ್ಯವನ್ನು ಸೇರ್ಪಡೆ ಮಾಡಿದ ವಿಚಾರಕ್ಕೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮದ್ಯ ಯಾವಾಗ ಅಗತ್ಯ ವಸ್ತುವಾಯ್ತು.. ಸರ್ಕಾರಕ್ಕೆ ಬಿಜೆಪಿ ಶಾಸಕನಿಂದಲೇ ನೇರ ಪ್ರಶ್ನೆ - ಮದ್ಯ ಯಾವಾಗ ಅಗತ್ಯ ವಸ್ತುವಾಯ್ತು,
ಅವಶ್ಯಕ ವಸ್ತುಗಳ ಪಟ್ಟಿಯಲ್ಲಿ ಮದ್ಯವನ್ನೂ ಸೇರಿಸಿರುವ ಸಿಎಂ ಯಡಿಯೂರಪ್ಪ ನಿರ್ಧಾರಕ್ಕೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
aravind
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕೊರೊನಾ ನಿಯಂತ್ರಣಕ್ಕೆ ಉತ್ತಮ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಅತೀ ಅವಶ್ಯಕ ಸಾಮಗ್ರಿಗೆ ಅವಕಾಶ ಕೊಟ್ಟಿದ್ದಾರೆ. ಅದರಲ್ಲಿ ಕಿರಾಣಿ, ಆಹಾರಕ್ಕೆ ಅವಕಾಶ ಕೊಟ್ಟಿದ್ದನ್ನು ನಾ ಒಪ್ಪುವೆ. ಆದರೆ ಮದ್ಯದಂಗಡಿ ಯಾವಾಗಿಂದ ಅತೀ ಅವಶ್ಯ ಆಯ್ತು ಎಂದು ಪ್ರಶ್ನಿಸಿದರು.
ಈ ಸಲಹೆ ಸಿಎಂ ಬಿಎಸ್ವೈಗೆ ಯಾರೂ ಕೊಟ್ಟಿದ್ದಾರೋ ಗೊತ್ತಿಲ್ಲ. ಇದನ್ನು ನಾನು ಸಂಪೂರ್ಣ ವಿರೋಧಿಸುವೆ. ಅತೀ ಅವಶ್ಯಕ ಸಾಮಗ್ರಿಗಳ ಅಂಗಡಿಗಳು ಕಾರ್ಯ ನಿರ್ವಹಿಸಲಿ. ಆದರೆ ಬಾರ್ಗಳನ್ನು ಬಂದ್ ಮಾಡಬೇಕು ಎಂದು ಶಾಸಕ ಬೆಲ್ಲದ್ ಒತ್ತಾಯಿಸಿದರು.
Last Updated : Apr 25, 2021, 10:49 PM IST