ಕರ್ನಾಟಕ

karnataka

ETV Bharat / state

ತಾಲಿಬಾನ್ ಉಗ್ರರ ಸಮಸ್ಯೆಯಿಂದ ತೈಲ ಬೆಲೆ ಏರಿಕೆಯಾಗಿದೆ : ಬಿಜೆಪಿ ಶಾಸಕ‌ ಅರವಿಂದ ಬೆಲ್ಲದ್ - ಶಾಸಕ ಅರವಿಂದ ಬೆಲ್ಲದ

ಅಭಿವೃದ್ಧಿ ನೋಡಿ ಜನ‌ ಮತ ಹಾಕುತ್ತಾರೆ. ನಾವು ಪಾಲಿಕೆ ಚುನಾವಣೆಯಲ್ಲಿ 55 ರಿಂದ 60 ಸೀಟು ಗೆಲ್ಲುತ್ತೇವೆ. ಈ ಬಾರಿ ಪಾಲಿಕೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ..

MLA Aravind Bellad statement about Price hike
ಶಾಸಕ‌ ಅರವಿಂದ ಬೆಲ್ಲದ

By

Published : Sep 4, 2021, 8:36 PM IST

ಧಾರವಾಡ :ಅಫ್ಘಾನಿಸ್ತಾನದಲ್ಲಿನತಾಲಿಬಾನ್ ಸಮಸ್ಯೆಯಿಂದ ಇಂಧನ ಬೆಲೆ ಏರಿಕೆಯಾಗಿದೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಹೇಳಿದ್ದಾರೆ.

ನಗರದಲ್ಲಿ‌‌‌ ನಿನ್ನೆ ಪಾಲಿಕೆ ಚುನಾವಣೆ ವೇಳೆ ಮತ ಚಲಾಯಿಸಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು, ಗ್ಯಾಸ್ ದರ ಹೆಚ್ಚಳ ಯಾಕೆ ಆಗಿದೆ ಎಂದು ಮತದಾರರು ವಿಚಾರ ಮಾಡಿ ಹಾಕ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಏರಿಕೆಯಾಗಿದೆ ಎಂದು‌ ಸಮರ್ಥಿಸಿಕೊಂಡರು.

ತೈಲ ದರ ಏರಿಕೆ ಸಮರ್ಥಿಸಿಕೊಂಡ ಬಿಜೆಪಿ ಶಾಸಕ‌ ಅರವಿಂದ ಬೆಲ್ಲದ್

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಚ್ಚಾತೈಲ ಬರುತ್ತಿಲ್ಲ. ಹೀಗಾಗಿ, ಬೆಲೆ ಏರಿದೆ. ಅಭಿವೃದ್ಧಿ ನೋಡಿ ಜನ‌ ಮತ ಹಾಕುತ್ತಾರೆ. ನಾವು ಪಾಲಿಕೆ ಚುನಾವಣೆಯಲ್ಲಿ 55 ರಿಂದ 60 ಸೀಟು ಗೆಲ್ಲುತ್ತೇವೆ. ಈ ಬಾರಿ ಪಾಲಿಕೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.

ABOUT THE AUTHOR

...view details