ಧಾರವಾಡ: ಮುಖ್ಯಮಂತ್ರಿ ಬದಲಾವಣೆ ವಿಷಯಕ್ಕೆ ಸಂಬಂಧಪಟ್ಟಂತೆ ಮಾಧ್ಯಮದವರ ಪ್ರಶ್ನೆಗೆ ಶಾಸಕ ಅರವಿಂದ್ ಬೆಲ್ಲದ ನೋ ಕಮೆಂಟ್ಸ್ ಎಂದರು.
ಧಾರವಾಡದಲ್ಲಿ ಮಾತನಾಡಿದ ಅವರು, ನಾಯಕತ್ವ ಬದಲಾವಣೆಯ ಬಗ್ಗೆ ನೀವು ಸಿಎಂ ಅವರನ್ನೇ ಕೇಳಬೇಕು. ಶಾಸಕರು ಯಾರು ಸಿಎಂ ಬದಲಾವಣೆಗೆ ಸಹಿ ಸಂಗ್ರಹಕ್ಕೆ ಮುಂದಾಗಿಲ್ಲ ಎಂದರು.

ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರ ಇಲಾಖೆಗೆ ಹಣ ಬಿಡುಗಡೆ ಮಾಡುವ ವಿಚಾರಕ್ಕೆ ಸಹಿ ಸಂಗ್ರಹ ಮಾಡಲಾಗಿದೆ. ಅದನ್ನೇ ಇಲ್ಲಿ ಬಳಕೆ ಮಾಡಿಕೊಂಡಿರಬೇಕು. ಸಿಎಂ ಬದಲಾವಣೆಯ ಬಗ್ಗೆ ಶಾಸಕಾಂಗ ಪಕ್ಷದ ಸಭೆ ನಡೆದಾಗ ಗೊತ್ತಾಗುತ್ತದೆ. ಈ ಬಗ್ಗೆ ನೋ ಕಮೆಂಟ್ಸ್ ಎಂದು ಹೇಳಿದರು.
ರಾಜ್ಯದಲ್ಲಿ ಅನ್ಲಾಕ್ ಮಾಡುವ ಅಗತ್ಯವಿದೆ. ಪಾಸಿಟಿವಿಟಿ ದರ ಶೇ.9 ರಷ್ಟಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಖಾಲಿಯಿವೆ. ಆದ್ದರಿಂದ ಲಾಕ್‌ಡೌನ್ ತೆಗೆಯಬೇಕು. ಅನಾವಶ್ಯಕವಾಗಿ ಮತ್ತೆ ವಿಸ್ತರಣೆ ಮಾಡುವುದು ಸರಿಯಲ್ಲ. ಎಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಿದೆಯೋ ಅಲ್ಲಿ ಮಾತ್ರ ಮಾಡಬೇಕು ಎಂದರು.
ಇದನ್ನೂಓದಿ : ಮುಖ್ಯಮಂತ್ರಿ ರಾಜೀನಾಮೆ ವಿಚಾರ: ಪ್ರತಿಕ್ರಿಯಿಸಲು ನಿರಾಕರಿಸಿದ ಸಚಿವ ಈಶ್ವರಪ್ಪ!