ಧಾರವಾಡ: ರಾಷ್ಟ್ರಧ್ವಜದ ಕೆಳಗೆ ಭಗವಾಧ್ವಜ ಹಾರಿದರೇ ತಪ್ಪೇನು..? ಎಂದು ಧಾರವಾಡ ಗ್ರಾಮೀಣ ಬಿಜೆಪಿ ಶಾಸಕ ಅಮೃತ ದೇಸಾಯಿ ಸಚಿವ ಈಶ್ವರಪ್ಪ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದೊಂದು ದಿನ ಕೆಂಪುಕೋಟೆಯಲ್ಲಿ ಭಗವಾಧ್ವಜ ಹಾರಬಹುದು ಎಂದಿದ್ದಾರೆ. ರಾಷ್ಟ್ರ ಧ್ವಜದ ಕೆಳಗೆ ಭಗವಾಧ್ವಜ ಹಾರಿದರೆ ತಪ್ಪೇನು? ನೂರಾರು ವರ್ಷದ ನಂತರ ಹಾರಬಹುದು ಎಂದಿದ್ದಾರೆ. ರಾಷ್ಟ್ರ ಧ್ವಜ ತೆಗೆಯುತ್ತೇವೆ ಎಂದಿಲ್ಲ ಎಂದು ಸಮರ್ಥನೆ ಮಾಡಿಕೊಂಡರು. ಈಶ್ವರಪ್ಪಗೆ ಪಕ್ಷದ ಅಧ್ಯಕ್ಷರ ಸೂಚನೆ ವಿಚಾರವಾಗಿ ಮಾತನಾಡಿದ ಅವರು ಈಶ್ವರಪ್ಪನವರಿಗೆ ಏನೂ ಹೇಳಿದ್ದಾರೆಂಬ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.