ಹುಬ್ಬಳ್ಳಿ:ಬಿಡ್ನಾಳದಲ್ಲಿ ಗಣೇಶೋತ್ಸವ ಹಾಗೂ ಮೊಹರಂ ಹಬ್ಬವನ್ನು ಒಂದೇ ವೇದಿಕೆಯಲ್ಲಿ ಭಾವೈಕ್ಯತೆಯಿಂದ ಆಚರಿಸಲಾಗುತ್ತಿದ್ದು, ಇಲ್ಲಿಗೆ ಇಂದು ಶಾಸಕ ಪ್ರಸಾದ ಅಬ್ಬಯ್ಯ ಭೇಟಿ ನೀಡಿ ಶುಭ ಹಾರೈಸಿದರು.
ಹಿಂದೂ- ಮುಸ್ಲಿಂ ಭಾವೈಕ್ಯತೆಯ ಪ್ರತೀಕ ಮೊಹರಂ: ಅಬ್ಬಯ್ಯ - Hubli latest news
ಹುಬ್ಬಳ್ಳಿಯ ಬಿಡ್ನಾಳದಲ್ಲಿ ಮೊಹರಂ ಹಾಗೂ ಗಣೇಶೋತ್ಸವವನ್ನು ಭಾವೈಕ್ಯತೆಯಿಂದ ಒಂದೇ ವೇದಿಕೆಯಲ್ಲಿ ಆಚರಿಸುತ್ತಿದ್ದು, ಇಂದು ಸ್ಥಳಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಭೇಟಿ ನೀಡಿದರು.
Hubli
ಈ ವೇಳೆ ಮಾತನಾಡಿದ ಅವರು, ವಿವಿಧತೆಯಲ್ಲಿ ಏಕತೆ ಸಾರುವ ಭಾರತ ದೇಶದಲ್ಲಿ ಮಾತ್ರ ಇಂಥ ಭಾವೈಕ್ಯತೆಯನ್ನು ಕಾಣಲು ಸಾಧ್ಯ. ಹಿಂದೂ- ಮುಸ್ಲಿಂ ಭಾಂದವರ ಭಾವೈಕ್ಯತೆಯ ಪ್ರತೀಕವೇ ಈ ಮೊಹರಂ ಹಬ್ಬವಾಗಿದೆ ಎಂದು ಹೇಳಿದರು.
ಪಾಲಿಕೆ ಮಾಜಿ ಸದಸ್ಯರಾದ ಮೋಹನ ಅಸುಂಡಿ, ವಿಜನಗೌಡ ಪಾಟೀಲ, ಸ್ಥಳೀಯರಾದ ಪರುತಪ್ಪ ಬಳಗಣ್ಣವರ, ಫಕೀರಪ್ಪ ಕಲ್ಲಣ್ಣವರ, ಚನ್ನಬಸಪ್ಪ ಅಸುಂಡಿ, ಸಿದ್ದಪ್ಪ ಮೇಟಿ, ಹನುಮಂತಗೌಡ ಪಾಟೀಲ, ಗುರುಸಿದ್ದಪ್ಪ ಕಟಗಿ, ಫರ್ವೇಜ್ ಕೊಣ್ಣೂರು, ಮೆಹಮೂದ್ ಕೋಳೂರು, ಅಜರ್ ಮನಿಯಾರ್ ಹಾಗು ಇತರರು ಇದ್ದರು.