ಹುಬ್ಬಳ್ಳಿ: ಯುವಕನನ್ನು ಮನೆಯೊಂದರಲ್ಲಿ ಕೂಡಿ ಹಾಕಿದ ಪುಡಿರೌಡಿಗಳು ಮನಬಂದಂತೆ ಥಳಿಸಿರುವ ಘಟನೆ ವಿದ್ಯಾನಗರದಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ವಿವಿನ ರಿಚರ್ಡ್ ಎಂದು ಗುರುತಿಸಲಾಗಿದೆ. ವಿಜಯ ಬಿಜವಾಡ ಹಾಗೂ ಆತನ ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಜನವರಿ 15ರ ಮಧ್ಯರಾತ್ರಿ ಎರಡು ಗಂಟೆಗೆ ಆರೋಪಿಗಳು ಊಟಕ್ಕೆ ತೆರಳಿದ್ದರು. ಅದೇ ಸಮಯದಲ್ಲಿ ಹೋಟೆಲ್ ಹೊರಗಡೆ ರಿಚರ್ಡ್ ಜೊತೆಗೆ ಸಿಗರೇಟ್ ವಿಚಾರವಾಗಿ ಜಗಳ ಆರಂಭಿಸಿದ್ದಾರೆ. ಈ ಜಗಳ ವಿಕೋಪಕ್ಕೆ ತಿರುಗಿ ರಿಚರ್ಡ್ ಮೇಲೆ ಹಲ್ಲೆ ನಡೆಸಿ, ತಮ್ಮ ಕಾರ್‌ನಲ್ಲೇ ಕರೆದೊಯ್ದಿದ್ದಾರೆ. ಬಳಿಕ ಮನೆಯೊಂದರಲ್ಲಿ ಕೂಡಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ರಿಚರ್ಡ್ ಆರೋಪಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.