ಕರ್ನಾಟಕ

karnataka

ETV Bharat / state

ಹೆಚ್​.ವಿಶ್ವನಾಥ್​ರಿಗೆ ಸಚಿವ ಸ್ಥಾನ ನೀಡುವುದು ಸಿಎಂಗೆ ಬಿಟ್ಟ ವಿಚಾರ: ಸಚಿವ ಸೋಮಶೇಖರ್​​ - Minister STSomashekhar

ವಿಶ್ವನಾಥ್​ರಿಗೆ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸ್ಥಾನ ನೀಡುವುದು ಸಿಎಂಗೆ ಬಿಟ್ಟ ವಿಚಾರ. ನಾವು ಸಹ ಹೆಚ್​.ವಿಶ್ವನಾಥ್​ ಅವರನ್ನು ಸಚಿವರನ್ನಾಗಿ ಮಾಡಿ ಅಂತ ಮನವಿ ಮಾಡಬಹುದು ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಸಚಿವ ಎಸ್.ಟಿ ಸೋಮಶೇಖರ್
ಸಚಿವ ಎಸ್.ಟಿ ಸೋಮಶೇಖರ್

By

Published : Jun 20, 2020, 5:11 PM IST

ಹುಬ್ಬಳ್ಳಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಸಿಎಂ ಬಿಎಸ್​ವೈ ಕೊಟ್ಟ ಮಾತನಿಂತೆಯೇ ಶೇ. 99ರಷ್ಟು ನಡೆದುಕೊಂಡಿದ್ದಾರೆ. ಆದರೆ ಹೆಚ್​.ವಿಶ್ವನಾಥ್​ ಅವರದು‌ ಮಾತ್ರ ಉಳಿದುಕೊಂಡಿದೆ. ಮುಂದಿನ ದಿನಗಳಲ್ಲಿ ಅವರಿಗೂ ಒಳ್ಳೆಯ ಸ್ಥಾನ‌ಮಾನ‌ ಸಿಗಲಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಸಚಿವ ಎಸ್.ಟಿ.ಸೋಮಶೇಖರ್

ನಗರದಲ್ಲಿಂದು ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಜೊತೆ ವಿಶ್ವನಾಥ್​ ಮಾತನಾಡಿದ್ದಾರೆ. ಅವರು ಸಹ ಒಪ್ಪಿಕೊಂಡಿದ್ದಾರೆ. ಮುಂದಿನ‌ ದಿನಗಳಲ್ಲಿ ಅವರಿಗೂ ಅವಕಾಶ ಸಿಗಲಿದೆ. ವಿಶ್ವನಾಥ್​ರಿಗೆ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸ್ಥಾನ ನೀಡುವದು ಸಿಎಂಗೆ ಬಿಟ್ಟ ವಿಚಾರ. ನಾವು ಸಹ ಹೆಚ್​.ವಿಶ್ವನಾಥ್​ ಅವರನ್ನು ಸಚಿವರನ್ನಾಗಿ ಮಾಡಿ ಅಂತ ಮನವಿ ಮಾಡಬಹುದು. ಆದರೆ ಸಂಪುಟ ವಿಸ್ತರಣೆ ಮಾಡುವುದು ಸಿಎಂ ಅವರ ಪರಮಾಧಿಕಾರವಾಗಿದೆ ಎಂದರು.

ABOUT THE AUTHOR

...view details