ಧಾರವಾಡ: ಕೊರೊನಾ ಮುಖ್ಯವಾಗಿ ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಅತಿಸಾರ ಮುಖಾಂತರ ಕಾಣಿಸಿಕೊಳ್ಳುತ್ತಿದೆ. ಮುಂಜಾಗೃತಾ ಕ್ರಮವಾಗಿ ಜ್ವರ ಪ್ರಕರಣಗಳನ್ನು ಶೀಘ್ರ ಪತ್ತೆ ಹಚ್ಚುವ ಅವಶ್ಯಕತೆ ಮನಗಂಡಿರುವ ಸರ್ಕಾರ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿಯಲ್ಲಿ ಸ್ಥಾಪಿಸಿರುವ ಫೀವರ್ ಕ್ಲಿನಿಕ್ಗಳ ಕಾರ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಪರಿಶೀಲಿಸಿದರು.
ಧಾರವಾಡದ ಫೀವರ್ ಕ್ಲಿನಿಕ್ ಕಾರ್ಯವಿಧಾನ ಪರಿಶೀಲಿಸಿದ ಸಚಿವ ಶೆಟ್ಟರ್ - procedure of Fiver Clinic in Dharwad
ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿಯಲ್ಲಿ ಸ್ಥಾಪಿಸಿರುವ ಫೀವರ್ ಕ್ಲಿನಿಕ್ಗಳ ಕಾರ್ಯ ವಿಧಾನವನ್ನು ಸಚಿವ ಜಗದೀಶ ಶೆಟ್ಟರ್ ಪರಿಶೀಲಿಸಿದರು.
![ಧಾರವಾಡದ ಫೀವರ್ ಕ್ಲಿನಿಕ್ ಕಾರ್ಯವಿಧಾನ ಪರಿಶೀಲಿಸಿದ ಸಚಿವ ಶೆಟ್ಟರ್ Minister Shetter reviewing the procedure of Fiver Clinic in Dharwad](https://etvbharatimages.akamaized.net/etvbharat/prod-images/768-512-6752250-916-6752250-1586603079669.jpg)
ಧಾರವಾಡದ ತೇಜಸ್ವಿ ನಗರದ ಪುರೋಹಿತ ನಗರದಲ್ಲಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು, ಫೀವರ್ ಕ್ಲಿನಿಕ್ಗಳ ಕಾರ್ಯ ವಿಧಾನ ಪರಿಶೀಲಿಸಿದರು. ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ್ ಮದೀನಕರ್, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ. ಎಸ್.ಎಂ.ಹೊನಕೇರಿ ಸಚಿವರಿಗೆ ಮಾಹಿತಿ ನೀಡಿದರು.
ಸಚಿವ ಶೆಟ್ಟರ್ ಫೀವರ್ ಕ್ಲಿನಿಕ್, ಉಳಿದ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ನೀಡುವ ಕೊಠಡಿ, ಲಸಿಕಾ ಕೊಠಡಿ ಹಾಗೂ ಔಷಧ ಸಂಗ್ರಹಣೆ, ಪ್ರಯೋಗಾಲಯಗಳಿಗೆ ಭೇಟಿ ನೀಡಿ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ. ಪರಶುರಾಮ ಎಫ್.ಕೆ. ಸೇರಿದಂತೆ ನರ್ಸ್ಗಳು, ಸಹಾಯಕ ಸಿಬ್ಬಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.