ಕರ್ನಾಟಕ

karnataka

ETV Bharat / state

ಹೆಸರುಕಾಳು ವಾಪಸ್‌ ಕೊಂಡೊಯ್ಯುವಂತೆ ನೋಟಿಸ್​ ನೀಡಿದ್ದು ಗಮನಕ್ಕೆ ಬಂದಿಲ್ಲ: ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ - etv bharath kannada news

ಹೆಸರುಕಾಳು ಖರೀದಿ ಮಾಡಲು ತೇವಾಂಶದ ಸಮಸ್ಯೆ ಇತ್ತು. ತೇವಾಂಶವನ್ನು ನೋಡದೆ ಖರೀದಿ ಕೇಂದ್ರದಲ್ಲಿ ಹೆಸರುಕಾಳು ಖರೀದಿ ಮಾಡಲಾಗುತ್ತಿದೆ ಎಂದು ಸಕ್ಕರೆ ಸಚಿವ ಶಂಕರಪಾಟೀಲ್ ಮುನೇನಕೊಪ್ಪ ಹೇಳಿದರು.

ಸಚಿವ ಶಂಕರಪಾಟೀಲ್ ಮುನೇನಕೊಪ್ಪ
ಸಚಿವ ಶಂಕರಪಾಟೀಲ್ ಮುನೇನಕೊಪ್ಪ

By

Published : Nov 23, 2022, 3:31 PM IST

ಹುಬ್ಬಳ್ಳಿ: ಮಾರಾಟ ಮಾಡಿದ ಹೆಸರು ಕಾಳುಗಳನ್ನು ವಾಪಸ್‌ ತೆಗೆದುಕೊಂಡು ಹೋಗಿ ಎಂದು ನೋಟಿಸ್ ನೀಡಿದ್ದು, ನನ್ನ ಗಮನಕ್ಕೆ ಬಂದಿಲ್ಲ. ನೋಟಿಸ್ ನೀಡಿದ್ರೆ ಅದನ್ನ ತಕ್ಷಣ ಪರಿಹಾರ ಮಾಡುತ್ತೇನೆ ಎಂದು ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಹೇಳಿದರು.

ನಗರದಲ್ಲಿಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜೋಶಿ ಕಪ್ ಕ್ರಿಕೆಟ್ ಟೂರ್ನಮೆಂಟ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ಹೆಸರುಕಾಳು ಖರೀದಿ ಮಾಡಲು ತೇವಾಂಶದ ಸಮಸ್ಯೆ ಇತ್ತು. ತೇವಾಂಶವನ್ನು ನೋಡದೆ ಖರೀದಿ ಕೇಂದ್ರದಲ್ಲಿ ರೈತರ ಹೆಸರು ಕಾಳುಗಳನ್ನು ಖರೀದಿ ಮಾಡಲಾಗುತ್ತಿದೆ. ನಾನು ಈಗಾಗಲೇ ಮಾರಾಟ ಮಂಡಳಿ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ.

ಖರೀದಿ ಕೇಂದ್ರಗಳಲ್ಲಿ 500 ರೈತರು ನೋಂದಣಿ ‌ಮಾಡಿಸಿದ್ರೆ, ಅದರಲ್ಲಿ 200 ಜನ ರೈತರಿಂದ ಮಾತ್ರ ಖರೀದಿ ಮಾಡಲಾಗಿದೆ. ಈಗಾಗಲೇ ಖರೀದಿ ಮಾಡುವ ಸಮಯ ಮುಗಿದಿದೆ. ಆದ್ದರಿಂದ ಇನ್ನೂ 15 ದಿನಗಳ ಕಾಲ ಖರೀದಿಗೆ ಅವಕಾಶ ‌ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಕಬ್ಬು ಬೆಳೆದ ರೈತರು ಎಫ್‌ಆರ್‌ಪಿ ಬೆಲೆಗಾಗಿ ಈಗಾಗಲೇ ಪ್ರತಿಭಟನೆ ಮಾಡಿದ್ದಾರೆ. ಎಫ್‌ಆರ್‌ಪಿ ಮೇಲೆ ಹೆಚ್ಚುವರಿಯಾಗಿ ಹಣ ನೀಡಬೇಕೆನ್ನುವುದು ರೈತರ ಬೇಡಿಕೆ. ಎಫ್‌ಆರ್‌ಪಿ ನಿಗದಿ ಮಾಡಿದ್ದು ಕೇಂದ್ರ ಸರ್ಕಾರ. ಎಫ್‌ಆರ್‌ಪಿ ಮೇಲೆ ಹೆಚ್ಚಿನ ಬೆಲೆಯನ್ನು ಸಕ್ಕರೆ ಕಾರ್ಖಾನೆಗಳು ನೀಡುತ್ತಿವೆ. ಕಬ್ಬು ಬೆಳೆದ ರೈತರ ಸಮಸ್ಯೆಗಳನ್ನು ಇತ್ಯರ್ಥ ಮಾಡಲಾಗಿದೆ.

ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಪ್ರತಿಕ್ರಿಯೆ

ಎಫ್‌ಆರ್‌ಪಿ ಮೇಲೆ ಹೆಚ್ಚಿನ ಬೆಲೆಗಾಗಿ ರೈತರು ಪಟ್ಟು ಹಿಡಿದಿದ್ದಾರೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಈಗಾಗಲೇ ‌ಮನವಿ ಮಾಡಿದ್ದೇವೆ. ಯಾವುದೇ ಒಂದೇ ಒಂದು ಸಕ್ಕರೆ ಕಾರ್ಖಾನೆ ರೈತನ ಕಬ್ಬಿನ ಬೆಲೆಯನ್ನು ಉಳಿಸಿಕೊಂಡಿಲ್ಲ. sಚಿವ ಮುರುಗೇಶ್ ನಿರಾಣಿಯವರ ಸಕ್ಕರೆ ‌ಕಾರ್ಖಾನೆಯ ವಿರುದ್ಧ ಒಂದು ದೂರು ಬಂದಿದೆ. 27 ಕೋಟಿ ರೂಪಾಯಿ ಬಾಕಿ‌ ಉಳಿಸಿಕೊಂಡಿದ್ದಾರೆಂದು ದೂರು ಇದೆ. ನಿರಾಣಿಯವರು ತಕ್ಷಣ ಬಾಕಿ ಹಣವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸಚಿವ ಮುನೇನಕೊಪ್ಪ ತಿಳಿಸಿದರು.

ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ..ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿಯವರ ಜನ್ಮದಿನದ ಅಂಗವಾಗಿ ನೆಹರು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಹ್ಲಾದ್ ಜೋಶಿ ಕಪ್ ಕ್ರಿಕೆಟ್ ಟೂರ್ನಮೆಂಟ್ ಗೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕೇಂದ್ರ ಸಚಿವರು ಕ್ರಿಕೆಟ್ ಗೆ ಉತ್ತೇಜನ ನೀಡುವ ಮೂಲಕ ತಮ್ಮಲ್ಲಿರುವ ಕ್ರೀಡಾ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. 125 ಕೋಟಿ ವೆಚ್ಚದಲ್ಲಿ ಸ್ಪೋರ್ಟ್ಸ್ ಪಾರ್ಕ್ ನಿರ್ಮಾಣದ ಮೂಲಕ ಯುವ ಸಮುದಾಯವನ್ನು ಕ್ರೀಡೆಗೆ ಉತ್ತೇಜಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.

ಆಟದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಟೂರ್ನಮೆಂಟ್ ಯಶಸ್ವಿಯಾಗಿ ನೆರವೇರಿಸುವ ಕಾರ್ಯವನ್ನು ಮಾಡಬೇಕು ಎಂದು ಸಚಿವರು ಸಲಹೆ ನೀಡಿದರು.

ಓದಿ:ಹಳಿಯಾಳ ಪ್ಯಾರಿ ಸಕ್ಕರೆ ಕಾರ್ಖಾನೆ ಕುರಿತು ವರದಿ ಪಡೆದು, ಸೂಕ್ತ ಕ್ರಮ: ಸಚಿವ ಮುನೇನಕೊಪ್ಪ

ABOUT THE AUTHOR

...view details