ಕರ್ನಾಟಕ

karnataka

ETV Bharat / state

ಸಿಎಂ ಬದಲಾವಣೆ ವಿಚಾರ ಅದೊಂದು ಊಹಾಪೋಹ ಅಷ್ಟೇ.. ಸಚಿವ ಶಂಕರ ಪಾಟೀಲ ಮುನೇನಕೊಪ್ಪ - ಮತಾಂತರ ತಡೆ ಕಾಯಿದೆ

ಕಾಯಿದೆ ಬಗ್ಗೆ ಕ್ಯಾಬಿನೆಟ್‌ನಲ್ಲಿ ಕೆಲ ತೀರ್ಮಾನ ಆಗಿವೆ. ಆ ತೀರ್ಮಾನದಂತೆ ಆ ವಿಚಾರಗಳು ಬರಲಿವೆ. ಇದಕ್ಕೆ ವಿರೋಧ ಪಕ್ಷದ ಪ್ರತಿಕ್ರಿಯೆ ನೋಡಬೇಕಿದೆ..

minister-shankar-pateel
ಸಚಿವ ಶಂಕರ ಪಾಟೀಲ ಮುನೇನಕೊಪ್ಪ

By

Published : Dec 21, 2021, 5:26 PM IST

ಧಾರವಾಡ :ಸಿಎಂ ಬದಲಾವಣೆ ವಿಚಾರ ಅದೊಂದು ಊಹಾಪೋಹ ಅಷ್ಟೇ ಎಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಬೊಮ್ಮಾಯಿ ನಮ್ಮ ಶಾಸಕಾಂಗ ಪಕ್ಷದ ನಾಯಕ. ನಮ್ಮ ನಾಯಕರು ಅಂತಾ ಒಪ್ಪಿದ್ದೇವೆ. ಅಮಿತ್ ಶಾ, ನಡ್ಡಾ ಹಾಗೂ ಎಲ್ಲ ನಾಯಕರು ಒಪ್ಪಿದ್ದಾರೆ.

ಬದಲಾವಣೆ ಅನ್ನೋದು ಮಾಧ್ಯಮದಲ್ಲಿ ಮಾತ್ರ ಕೇಳಿದ್ದೇವೆ. ಪಕ್ಷದಲ್ಲಿ ಬದಲಾವಣೆ ಮಾಡುವುದಿಲ್ಲ. ಅಂತಹ ಬದಲಾವಣೆ ನಮ್ಮ ಕಣ್ಣ ಮುಂದೆ ಇಲ್ಲ ಎಂದರು.

ಸಿಎಂ ಬದಲಾವಣೆ ಕುರಿತಂತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಪ್ರತಿಕ್ರಿಯೆ ನೀಡಿರುವುದು..

ನಿರಾಣಿ ಮುಂದಿನ ಸಿಎಂ ಎಂದು ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಅದು 2023 ಆದ ಮೇಲೆ ಅಂತಾ ಅವರು ಹೇಳಿದ್ದಾರೆ. ಅವತ್ತಿನ ಸಮಯ, ಸಂದರ್ಭ ಹೇಗಿರುತ್ತೋ ಗೊತ್ತಿಲ್ಲ. ಬದಲಾವಣೆ ಮಾಡುವ ಪ್ರಕ್ರಿಯೆ ಸದ್ಯಕ್ಕಿಲ್ಲ ಎಂದು ಜಾರಿಕೊಂಡರು.

ಮತಾಂತರ ತಡೆ ಕಾಯಿದೆ ಅಂಗೀಕಾರ ವಿಚಾರಕ್ಕೆ ಮಾತನಾಡಿದ ಅವರು, ಕಾಯಿದೆ ಬಗ್ಗೆ ಕ್ಯಾಬಿನೆಟ್‌ನಲ್ಲಿ ಕೆಲ ತೀರ್ಮಾನ ಆಗಿವೆ. ತೀರ್ಮಾನದಂತೆ ಆ ವಿಚಾರಗಳು ಬರಲಿವೆ. ಇದಕ್ಕೆ ವಿರೋಧ ಪಕ್ಷದ ಪ್ರತಿಕ್ರಿಯೆ ನೋಡಬೇಕಿದೆ.

ಸಹಕಾರ ಕೊಡುತ್ತಾರೆಯೋ ವಿರೋಧ ಮಾಡುತ್ತಾರೋ? ನೋಡಬೇಕು. ಅದು ಇವತ್ತು ರಾಜ್ಯ, ದೇಶದ ಜನರಿಗೆ ಗೊತ್ತಾಗಲಿದೆ. ಎಲ್ಲ ವಿಷಯಕ್ಕೂ ಅವರು ವಿರೋಧ ಮಾಡುತ್ತ ಬಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಓದಿ:ಎಂಇಎಸ್ ವಿರುದ್ಧ ಚಾಮರಾಜನಗರದಲ್ಲಿ ಸರಣಿ ಪ್ರತಿಭಟನೆ : ಉದ್ಧವ್ ಠಾಕ್ರೆ "ತಿಥಿ" ಮಾಡಿದ ಹೋರಾಟಗಾರರು!!

ABOUT THE AUTHOR

...view details