ಧಾರವಾಡ:ಉಪಚುನಾವಣೆ ನಡೆದ ಎರಡೂ ಕಡೆ ನಾವೇ ಗೆಲ್ಲುತ್ತೇವೆ. ಈ ಫಲಿತಾಂಶದಿಂದ ಸರ್ಕಾರದ ಮೇಲೆ ಯಾವುದೇ ಪರಿಣಾಮ ಆಗದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಮ್ಮ ಬಹುಮತದ ಸರ್ಕಾರವಿದೆ. ಹೀಗಾಗಿ ಎರಡೂ ಚುನಾವಣೆ ನಾವೇ ಗೆಲ್ಲುತ್ತೇವೆ. ನಾಳೆ ಮಧ್ಯಾಹ್ನದೊಳಗೆ ಎಲ್ಲವೂ ಗೊತ್ತಾಗುತ್ತದೆ ಎಂದರು.