ಸಚಿವೆ ಶಶಿಕಲಾ ಜೊಲ್ಲೆ ಒಡೆತನದ ಸೊಸೈಟಿಯಲ್ಲಿ ಕಳ್ಳತನ ಪ್ರಕರಣ ಧಾರವಾಡ:ಸಚಿವೆ ಶಶಿಕಲಾ ಜೊಲ್ಲೆ ಒಡೆತನದ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ ಕಳ್ಳತನ ಮಾಡಿದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಧಾರವಾಡ ಶಹರ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ಡಿಸೆಂಬರ್ 31 ರ ರಾತ್ರಿ ಬ್ಯಾಂಕ್ ಕಳ್ಳನತವಾಗಿತ್ತು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಮಾಹಿತಿ ನೀಡಿದ್ದಾರೆ.
ಧಾರವಾಡ ಕೋರ್ಟ್ ವೃತ್ತದ ಬಳಿ ಇರುವ ಬೀರೇಶ್ವರ ಕೋ ಆಪ್ ಕ್ರೆಡಿಟ್ ಬ್ಯಾಂಕ್‌ನಲ್ಲಿ ಒಟ್ಟು 40 ಲಕ್ಷ ರೂ ಮೌಲ್ಯದ ನಗದು ಹಾಗೂ ಚಿನ್ನಾಭರಣ ದೋಚಲಾಗಿತ್ತು. ಕಳ್ಳರು ಅಲ್ಲಿನ ಸಿಸಿಟಿವಿಯನ್ನೂ ಹೊತ್ತೊಯ್ದಿದ್ದರು. ವೈಜ್ಞಾನಿಕವಾಗಿ ತನಿಖೆ ಮಾಡಿ ಪ್ರಕರಣವನ್ನು ಪೊಲೀಸರು ಬಗೆಹರಿಸಿದ್ದಾರೆ.
ಯುವರಾಜ್ ರಾಮಪೂರ ಹಾಗೂ ವೈಷ್ಣವಿ ಎಂಬ ಆರೋಪಿಗಳು ಬೀರೇಶ್ವರ ಬ್ಯಾಂಕ್ ಸಿಬ್ಬಂದಿಗಳಾಗಿದ್ದು, ಬಂಧಿತರಾಗಿದ್ದಾರೆ. ಯುವರಾಜ್ ಇದೇ ಬ್ಯಾಂಕ್‌ನ ಹಳೆ ಸಿಬ್ಬಂದಿ. 40 ಲಕ್ಷ ರೂ ಬೆಲೆಬಾಳುವ ಮಾಲು ಕಳ್ಳತನ ಮಾಡಿ ಇಬ್ಬರೂ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಯುಟ್ಯೂಬ್ ನೋಡಿ ಕಳ್ಳತನ:ಆರೋಪಿಗಳು ಯುಟ್ಯೂಬ್ ವಿಡಿಯೋ ನೋಡಿ ಕಳ್ಳತನ ಮಾಡಿದ್ದರು. ಹೀಗಾಗಿ ಯಾವುದೇ ಸುಳಿವು ಬಿಟ್ಟಿರಲಿಲ್ಲ. ಆದರೂ ತನಿಖೆ ಮಾಡಿ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಯುವರಾಜ್ ಬೆಳಗಾವಿ ಮೂಲದ ವ್ಯಕ್ತಿ. ಯಾವ ಕಾರಣಕ್ಕೆ ಕಳ್ಳತನ ಮಾಡಿದ್ದರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಪೊಲೀಸ್ ಆಯುಕ್ತರು ಹೇಳಿದರು. ಶಹರ ಪೊಲೀಸ್ ತಂಡದ ಜೊತೆ ಇನ್ನೂ ಹಲವು ತಂಡದಿಂದ ಕಾರ್ಯಾಚರಣೆ ನಡೆಸಿದವರಿಗೆ 25 ಸಾವಿರ ಬಹುಮಾನ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ:ಸಾಲ ತೀರಿಸಲು ಪ್ರಯಾಣಿಕನ ಹಣದ ಬ್ಯಾಗ್ ಸಮೇತ ಪರಾರಿಯಾಗಿದ್ದ ಆಟೋ ಚಾಲಕನ ಬಂಧನ