ಧಾರವಾಡ: ನಿನ್ನೆ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಏನಾಯ್ತು ಅನ್ನೋ ಮಾಹಿತಿ ನನಗೆ ಗೊತ್ತಿಲ್ಲ. ಎರಡೂ ಪಕ್ಷಗಳ ಹಿರಿಯರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಮೈತ್ರಿ ಪಕ್ಷಗಳ ನಡುವಿನ ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ನೀಡದ ವಿಚಾರ ನನಗೆ ಗೊತ್ತಿಲ್ಲ. ಅವರಿಗೆ ಅಕಸ್ಮಾತ್ ಟಿಕೆಟ್ ಕೊಟ್ರೆ ಎಲ್ಲರೂ ಸಹಕರಿಸಬೇಕಾಗುತ್ತೆದೆ ಎಂದರು.
ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಇನ್ನು ಜೆಡಿಎಸ್ನ ಕುಟುಂಬ ರಾಜಕಾರಣ ಕುರಿತು ಮಾತನಾಡಿದ ದೇಶಪಾಂಡೆ, ಬೇರೆಯವರ ಬಗ್ಗೆ ನಾನು ಕಮೆಂಟ್ ಮಾಡೋದಿಲ್ಲ. ಅದು ಅವರ ಪಕ್ಷದ ವಿಚಾರ. ಅದರ ಸಾಧಕ-ಬಾಧಕದ ಬಗ್ಗೆ ಅವರು ವಿಚಾರ ಮಾಡ್ಕೋತಾರೆ. ನಮ್ಮ ಪಕ್ಷದ ಬಗ್ಗೆ ಕೇಳಿದರೆ ನಾನು ಮಾತನಾಡುವೆ ಎಂದರು.
ಚಿಂಚೋಳಿ ಶಾಸಕ ರಮೇಶ್ ಜಾಧವ್ ರಾಜೀನಾಮೆ ಕೊಡಬಾರದಿತ್ತು. ಪಕ್ಷ ಅವರನ್ನ ಬೆಳೆಸಿತ್ತು. ಅವರನ್ನ ನಾಯಕನನ್ನಾಗಿ ಮಾಡಿತ್ತು. ಪಕ್ಷದಲ್ಲಿ ಒಳ್ಳೆಯ ಭವಿಷ್ಯ ಇತ್ತು. ಆದ್ರೆ ಯಾಕೆ ಬಿಟ್ರು ಅನ್ನೋದು ನನಗೆ ಗೊತ್ತಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚಿನ ಸೀಟು ಗೆಲ್ಲುತ್ತೆ. ಕೇಂದ್ರದಲ್ಲಿ ಯಾವ ಸರ್ಕಾರ ಬರುತ್ತೆ ಅಂತ ಹೇಳೋಕೆ ನಾನು ಭವಿಷ್ಯವಾಣಿಯಲ್ಲ. ಅದನ್ನ ಜನರು ನಿರ್ಧರಿಸುತ್ತಾರೆ. ಆದ್ರೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.