ಧಾರವಾಡ: ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಸಾಕಷ್ಟು ಹಾನಿಯಾಗಿದ್ದು ಕೂಡಲೇ ಅಧಿಕಾರಿಗಳು ಸರ್ಕಾರದ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಮುಟ್ಟಿಸಲು ಚುರುಕಾಗಿ ಕೆಲಸ ಮಾಡಬೇಕೆಂದು ಕಂದಾಯ ಸಚಿವ ಆರ್.ಅಶೋಕ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ನಡೆದ ಅಧಿಕಾರಗಳ ಸಭೆಯಲ್ಲಿ ನೆರೆ ಹಾನಿ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಸಾರ್ವಜನಿಕರು ಸರ್ಕಾರಿ ಕಚೇರಿಗೆ ಅಲೆದಾಡಿ ಚಪ್ಪಲಿ ಸವೆಸಿರುವುದು ಸಾಕು. ಇನ್ನಾದರೂ ಅಧಿಕಾರಿಗಳು ಸಾರ್ವಜನಿಕರ ಮನೆ ಮನೆಗೆ ಭೇಟಿ ನೀಡಿ ಜನತೆಯ ಅಳಲನ್ನು ಆಲಿಸಬೇಕು. ಧಾರವಾಡ ಜಿಲ್ಲೆಗೆ ನೆರೆ ಪರಿಹಾರಕ್ಕೆ ಸರ್ಕಾರದಿಂದ 214 ಕೋಟಿ ರೂ ಹಣವನ್ನು ನೀಡಲಾಗಿದೆ. ಅಲ್ಲದೇ 68 ಕೋಟಿ ರೂ ಹಣವನ್ನು ಬೆಳೆ ಪರಿಹಾರಕ್ಕಾಗಿ ನೀಡಲಾಗಿದ್ದು, ನೆರೆ ಸಂತ್ರಸ್ತರ ಮನೆ ನಿರ್ಮಾಣ ಕಾರ್ಯಗಳು 8 ತಿಂಗಳಲ್ಲಿ ಪೂರ್ಣಗೊಳ್ಳಬೇಕು ಎಂದು ಸೂಚನೆ ನೀಡಿದ್ರು.