ಧಾರವಾಡ:ಆರ್.ಎಸ್.ಎಸ್ ಬಗ್ಗೆ ಕಾಂಗ್ರೆಸ್ ಸರಣಿ ಟ್ವೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋಡ್ಸೆ ಆರ್.ಎಸ್.ಎಸ್ ನವರು ಎನ್ನುವುದು ಹಾಗೂ ಗಾಂಧಿ ಹತ್ಯೆ ಮಾಡಿದ್ದು ಆರ್.ಎಸ್.ಎಸ್ ಎನ್ನುವ ವಿಚಾರವನ್ನು ರಾಹುಲ್ ಗಾಂಧಿ ಹೇಳಿದ್ದರು. ಹೀಗೆ ಹೇಳಿ ಮಾನಹಾನಿ ಕೇಸ್‌ನಲ್ಲಿ ಕೋರ್ಟ್‌ಗೆ ಎಡತಾಕುತ್ತಿದ್ದಾರೆ. ಇನ್ನೊಂದಷ್ಟು ದಿನದಲ್ಲಿ ಕೋರ್ಟ್‌ಗೆ ಕ್ಷಮೆ ಕೇಳಿ ವಾಪಸ್ ಬರುತ್ತಾರೆ ಎಂದು ವ್ಯಂಗ್ಯವಾಡಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮಾತನಾಡಿದರು ಇಲ್ಲಿನ ಕಾಂಗ್ರೆಸ್ ಪರಿಸ್ಥಿತಿಯೂ ಅದೇ ಆಗುತ್ತದೆ. ವಲ್ಲಭಬಾಯ್ ಪಟೇಲರು ಕೇಂದ್ರದ ಗೃಹ ಮಂತ್ರಿ ಆಗಿದ್ದರು. ಗಾಂಧಿ ಹತ್ಯೆಗೂ ಆರ್‌ಎಸ್ಎಸ್‌ಗೂ ಸಂಬಂಧವಿಲ್ಲ ಅಂತಾ ಅವರೇ ಹೇಳಿದ್ದರು. ಆದರೆ, ಪಟೇಲ್‌ರ ಮೇಲೆ ಅವರಿಗೆ ವಿಶ್ವಾಸ ಇಲ್ಲ. ನೆಹರು, ರಾಜೀವ್ ಗಾಂಧಿ, ಇಂದಿರಾ ಗಾಂಧಿ, ಸೋನಿಯಾಗಾಂಧಿ, ರಾಹುಲ್ ಮತ್ತು ಪ್ರಿಯಾಂಕರಷ್ಟೇ ನಾಯಕರು ಪ್ರಿಯಾಂಕ್ ಗಾಂಧಿ ಮಕ್ಕಳೂ ಅವರಿಗೆ ಲೀಡರ್. ಎಲ್ಲ ತನಿಖೆ ಬಳಿಕವೇ ಪಟೇಲರು ಆಗ ಸ್ಪಷ್ಟಪಡಿಸಿದ್ದರು. ಆದರೂ ಕಾಂಗ್ರೆಸ್ ನಾಯಕರು ಅಜ್ಞಾನದಿಂದ ಹೀಗೆ ಹೇಳುತ್ತಿದ್ದಾರೆ ಎಂದು ಹರಿಹಾಯ್ದರು.
1983ರಲ್ಲಿ ಸಿಖ್‌ರ ಕೊರಳಿಗೆ ಬೆಂಕಿ ಹಚ್ಚಿ ಟೈರ್ ಹಾಕಿ ಕೊಂದಿದ್ದರು. ಮೂರು ಸಾವಿರ ಜನರ ನರಮೇಧ ಮಾಡಿದ್ದರು. 20-21ನೇ ಶತಮಾನದ ದೊಡ್ಡ ನರಮೇಧ ಅದು. ಅದು ಕಾಂಗ್ರೆಸ್ ಮಾಡಿದ ದೆಹಲಿ ಹತ್ಯಾಕಾಂಡ. ಇವರೇನು ಜನರಿಗೆ ಮಾತನಾಡುತ್ತಾರೆ?. ನಾಚಿಕೆ, ಮಾನ ಮರ್ಯಾದೆ ಇಲ್ವಾ?. ಇಡೀ ಎರಡು ವರ್ಷ ಪ್ರಜಾಪ್ರಭುತ್ವ ತಮ್ಮ ಕಾಲಿನಡಿ ಇಟ್ಟುಕೊಂಡವರು ಇವರು. ಇರುವೆ ಕಟ್ಟಿದ ಗೂಡಿನಲ್ಲಿ ಹಾವು ಹೊಕ್ಕಂತೆ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಆರ್.ಎಸ್.ಎಸ್ ಬೈಯುತ್ತಿದ್ದಾರೆ.
ಆರ್.ಎಸ್.ಎಸ್ ಹಿಂದೂ ಸಂಘಟನೆಯನ್ನು ಬೈದರೆ ಮತ್ತೆ ಸಿಎಂ ಮಾಡ್ತಾರೆಂಬ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯ ಆ ಭ್ರಮೆಯಲ್ಲಿರೋದು ಬೇಡ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಅಧಿಕಾರಕ್ಕೆ ಬಂದರೂ ನಿಮ್ಮನ್ನು ಸಿಎಂ ಮಾಡಲ್ಲ ಎಂದರು. ಇಡೀ ದೇಶದಲ್ಲಿ ಕಾಂಗ್ರೆಸ್ ನಶಿಸಿ ಹೋಗುತ್ತಿದೆ. ಯುಪಿ, ಪಂಜಾಬ್‌ದಲ್ಲಿ ಡಿಪಾಸಿಟ್ ಕಳೆದುಕೊಂಡಿದ್ದಾರೆ.
ಇಂತಹ ದುಸ್ಥಿತಿ ಇಟ್ಟುಕೊಂಡು ಬಾಯಿಗೆ ಬಂದಂತೆ ಮಾತನಾಡುತ್ತಿರಾ?. ಬಾಯಿಗೆ ಬಂದಂತೆ ಮಾತನಾಡಿ ರಾಹುಲ್ ಗಾಂಧಿ ಪರಿಸ್ಥಿತಿ ಹೀಗಾಗಿದೆ. ನೀವು ರಾಹುಲ್ ಗಾಂಧಿ ತರಹ ಆಗಬೇಡಿ, ರಾಹುಲ್ ಗಾಂಧಿಗೆ ಬುದ್ಧಿ ಇಲ್ಲ. ಏನೇನೋ ಮಾತನಾಡುತ್ತಾರೆ. ನೀವ್ಯಾಕೆ ಹಾಗೆ ಮಾತನಾಡುತ್ತೀರಿ. ಆರ್‌ಎಸ್‌ಎಸ್ ಬೈದು ಮುಸ್ಲಿಂ ವೋಟ್ ಪಡೆಯುವ ಪ್ರಯತ್ನವಷ್ಟೇ ಇದು ಎಂದರು.
ಓದಿ:ಪ್ರಹ್ಲಾದ್ ಜೋಶಿ ಯಾರ ಕಿವಿಗೆ ಹೂ ಮುಡಿಸುತ್ತಿದ್ದಾರೆ?: ದಿನೇಶ್ ಗುಂಡೂರಾವ್ ಪ್ರಶ್ನೆ