ಕರ್ನಾಟಕ

karnataka

ETV Bharat / state

ದಾವೂದ್ ಇಬ್ರಾಹಿಂಗೂ ಕಾಂಗ್ರೆಸ್‌ನವರು ಭಾರತರತ್ನ ಕೊಡಲಿದ್ದಾರೆ: ಪ್ರಹ್ಲಾದ್ ಜೋಶಿ ವ್ಯಂಗ್ಯ - ಮಧ್ಯಂತರ ಚುನಾವಣೆ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರಹ್ಲಾದ್​ ಜೋಷಿ ಪ್ರತಿಕ್ರಿಯೆ

ಮಾಜಿ ಸಿಎಂ ಸಿದ್ದರಾಮಯ್ಯ ವೀರ್ ಸಾವರ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗುಡುಗಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಪ್ರಹ್ಲಾದ್​ ಜೋಷಿ ವಾಗ್ದಾಳಿ

By

Published : Oct 19, 2019, 2:04 PM IST

Updated : Oct 19, 2019, 3:12 PM IST

ಹುಬ್ಬಳ್ಳಿ :ಮಾಜಿ ಸಿಎಂ ಸಿದ್ದರಾಮಯ್ಯ ವೀರ್ ಸಾವರ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗುಡುಗಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಧೈರ್ಯ ಇದ್ದರೆ ಅಂಬೇಡ್ಕರ್​ಗೆ ಮೊದಲೇ ಭಾರತ ರತ್ನ ಕೊಡಿ ಅಂತಾ ಕೇಳಬೇಕಿತ್ತು. ಅಂಬೇಡ್ಕರ್ ಅವರಿಗೆ ಮೊದಲು ಭಾರತರತ್ನ ನೀಡದೇ ರಾಜೀವ್​​ಗಾಂಧಿಯವರಿಗೆ ಕೊಡಲಾಗಿದೆ. ಅವರ ತಾತ, ತಾಯಿ ಪ್ರಧಾನಿಯಾಗಿದ್ದಕ್ಕೆ ಅವರಿಗೆ ಈ ಪ್ರಶಸ್ತಿ ಬಳುವಳಿ ಬಂತು. ಸಂವಿಧಾನ ಬರೆದಿರುವ ಅಂಬೇಡ್ಕರ್ ಅವರಿಗೆ ಈ ಮಹೋನ್ನತ ಪ್ರಶಸ್ತಿ ನೀಡಲಿಲ್ಲ ಎಂದರು.

ದೇಶ ಕಂಡ ಅಪ್ರತಿಮ ವೀರ ಸಾವರ್ಕರ್. ಅವರ ಬಗ್ಗೆ ಅಪಮಾನ ಮಾಡೋದು ಸರಿಯಲ್ಲ. ಸಿದ್ಧರಾಮಯ್ಯ ಅವರ ಈ ನಡೆಯನ್ನ ನಾನು ಖಂಡಿಸುತ್ತೇನೆ. ಮುಂದೆ ದಾವುದ್ ಇಬ್ರಾಹಿಂಗೂ ಕಾಂಗ್ರೆಸ್‌ನವರು ಭಾರತ ರತ್ನ ಕೊಡಲಿದ್ದಾರೆಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಮೊದಲು ಇತಿಹಾಸ ಸರಿಯಾಗಿ ಓದಿಕೊಂಡು ಮಾತನಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ಸಿದ್ದರಾಮಯ್ಯ ವಿರುದ್ಧ ಪ್ರಹ್ಲಾದ್​ ಜೋಷಿ ವಾಗ್ದಾಳಿ

ಇದೇ ವೇಳೆ, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಯಾವುದೇ ಮಧ್ಯಂತರ ಚುನಾವಣೆಯ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಪೂರ್ಣಾವಧಿ ಬಿಜೆಪಿ ಸರ್ಕಾರ ಇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಮಹದಾಯಿ ಹೋರಾಟಗಾರರು ಪ್ರತಿಭಟನೆಗೆ ಕುಳಿತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಮಹದಾಯಿ ಇತ್ಯರ್ಥಕ್ಕೆ ನಮ್ಮ ಕಡೆಯಿಂದ ಪ್ರಯತ್ನ ಮಾಡುತ್ತಿದ್ದೇವೆ. ಆದಷ್ಟು ಶೀಘ್ರ ಈ ವಿಚಾರ ಇತ್ಯರ್ಥಗೊಳ್ಳಲಿದೆ ಎಂದರು.

Last Updated : Oct 19, 2019, 3:12 PM IST

For All Latest Updates

TAGGED:

ABOUT THE AUTHOR

...view details