ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳಿ: ಅನೇಕ ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಶೇ.50 ಕ್ಕಿಂತ ಹೆಚ್ಚಿದೆ. ಮೀಸಲಾತಿ ಶೇ.50 ಕ್ಕಿಂತ ಹೆಚ್ಚಳ ಅಸಾಧ್ಯ ಎಂದು ಕೇಂದ್ರ ಸರ್ಕಾರ ಯಾವ ಹಿನ್ನೆಲೆಯಲ್ಲಿ ಲಿಖಿತ ಉತ್ತರ ನೀಡಿದೆ ಎಂದು ಪರಿಶೀಲಿಸುವುದಾಗಿ ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್ಸಿ, ಎಸ್ಟಿ ವರ್ಗಗಳ ಮೀಸಲಾತಿ ಹೆಚ್ಚಳಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಬದ್ಧವಾಗಿವೆ ಎಂದು ಸ್ಪಷ್ಟಪಡಿಸಿದರು. ಮೀಸಲಾತಿ ಹೆಚ್ಚಳವನ್ನು ರಾಜ್ಯ ಸರ್ಕಾರ ನಿಯಮಬದ್ಧವಾಗಿ ಮಾಡಿದೆ. ಹೀಗಾಗಿ ಮೀಸಲಾತಿ ಹೆಚ್ಚಳ ಕೈಬಿಡಲಿದೆ ಎಂಬ ಆತಂಕ ಬೇಡ. ಅವರ ಮೀಸಲಾತಿ ಹೆಚ್ಚಳ ಸರ್ಕಾರ ಹಾಗೂ ನಮ್ಮ ಪಕ್ಷದ ಬದ್ಧತೆಯಾಗಿದೆ. ಆದರೆ ಕೇಂದ್ರ ಸರ್ಕಾರದ ನೀಡಿರುವ ಲಿಖಿತ ಉತ್ತರ ಯಾವ ಹಿನ್ನೆಲೆಯಲ್ಲಿ ಹೇಳಲಾಗಿದೆ ಎಂದು ಮಾಹಿತಿ ಪಡೆದು ಸ್ಪಷ್ಟವಾಗಿ ತಿಳಿಸುತ್ತೇನೆಂದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿ, ಅವರು ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಟ್ಟಿರುವ ವಿಚಾರ. ಈ ಕುರಿತು ರಾಷ್ಟ್ರ ನಾಯಕರು ಯಾವ ಸೂಚನೆ ನೀಡುತ್ತಾರೋ ಅದರಂತೆ ಆಗಲಿದೆ ಎಂದರು. ನಂತರ ಮಾತನಾಡಿ ಅವರು ಮತಾಂತರ ಹಾಗೂ ಲವ್ ಜಿಹಾದ್ ವಿಚಾರವಾಗಿ ಆಯಾ ರಾಜ್ಯಗಳು ಈಗಾಗಲೇ ಸೂಕ್ತ ಕ್ರಮಕೈಗೊಂಡಿವೆ ಎಂದರು.
ಬಿಜೆಪಿಗರು ರೌಡಿಗಳಿಗೆ ರಾಜಕೀಯ ಪ್ರವೇಶ ನೀಡುತ್ತಿದ್ದಾರೆಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಹ್ಲಾ್ ಜೋಶಿ ಕಾಂಗ್ರೆಸ್ ಪಕ್ಷ ಗೂಂಡಾಗಿರಿ ಮಾಡುವವರನ್ನೇ ಪಕ್ಷದಲ್ಲಿರಿಸಿಕೊಂಡಿದ್ದಾರೆ. ಕೊಲೆ ಮಾಡುವ ಹಂತಕ್ಕೆ ಹೋದವರನ್ನು ಪಕ್ಷದಲ್ಲಿ ಅಧ್ಯಕ್ಷ ಸ್ಥಾನ ನೀಡುತ್ತಾರೆ. ನಮ್ಮ ಪಕ್ಷದ ಬಗ್ಗೆ ಕಾಂಗ್ರೆಸ್ನವರಿಗೆ ಮಾತನಾಡುವ ನೈತಿಕತೆ ಏನಿದೆ, ನಲಪಾಡ್ ಗೆ ಅಧ್ಯಕ್ಷ ಸ್ಥಾನನೀಡಿ ಕೂರಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ಸಲಾಂ ಆರತಿ ಕೈಬಿಟ್ಟಿದ್ದು ಸಂತೋಷದ ವಿಚಾರ.. ಕೇಂದ್ರ ಸಚಿವ ಜೋಶಿ