ಕರ್ನಾಟಕ

karnataka

ETV Bharat / state

ಆಕ್ಸಿಜನ್ ಆನ್ ವ್ಹೀಲ್ ಬಸ್​ಗೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಕಿಮ್ಸ್ ಮೂಲಕ ಕಾರ್ಯಾಚರಣೆ ಮಾಡುವ ಬಸ್​​ನಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಸೇರಿದಂತೆ ಇತರ ಉಪಕರಣಗಳನ್ನು ಅಳವಡಿಸಲಾಗಿದೆ. ಇದರಿಂದ ಒಂದು ಬಸ್​​ನಲ್ಲಿ ಆರು ಜನ ರೋಗಿಗಳಿಗೆ ಆಕ್ಸಿಜನ್ ಚಿಕಿತ್ಸೆ ನೀಡಲಾಗುತ್ತದೆ ಎಂದು ಜೈನ್ ಇಂಟರ್ನ್ಯಾ​ಷನಲ್ ಟ್ರೇಡ್ ಆರ್ಗನೈಸೇಶನ್ ತಿಳಿಸಿದೆ.

ಸಚಿವ ಪ್ರಹ್ಲಾದ ಜೋಶಿ
ಸಚಿವ ಪ್ರಹ್ಲಾದ ಜೋಶಿ

By

Published : May 17, 2021, 9:50 PM IST

ಹುಬ್ಬಳ್ಳಿ:ಆಕ್ಸಿಜನ್ ಕೊರತೆ ಎದುರಿಸುತ್ತಿರುವ ರೋಗಿಗಳಿಗೆ ಆಕ್ಸಿಜನ್​ ತಲುಪಿಸುವ ಸದುದ್ದೇಶದಿಂದ ಜೈನ್ ಇಂಟರ್​ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್​ ಕೈಗೆತ್ತಿಕೊಂಡಿರುವ ಆಕ್ಸಿಜನ್ ಆನ್ ವ್ಹೀಲ್ ಬಸ್ ಸೇವೆಗೆ ಕಿಮ್ಸ್ ಆವರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಇಂದು ಚಾಲನೆ ನೀಡಿದರು.

ಕೊರೊನಾ‌ ಚಿಕಿತ್ಸೆಗೆ ಆಕ್ಸಿಜನ್ ಬೆಡ್ ಸಮಸ್ಯೆ ಇರುವುದನ್ನು ಅರಿತು ಜೈನ್ ಇಂಟರ್​ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ಮಹತ್ವದ ಕಾರ್ಯವನ್ನು ಮಾಡಿರುವ ಬಗ್ಗೆ ಕೇಂದ್ರ ಸಚಿವರು ಅಭಿನಂದನೆ ಸಲ್ಲಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಕಿಮ್ಸ್ ಮೂಲಕ ಕಾರ್ಯಾಚರಣೆ ಮಾಡುವ ಬಸ್​​ನಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಸೇರಿದಂತೆ ಇತರ ಉಪಕರಣಗಳನ್ನು ಅಳವಡಿಸಲಾಗಿದೆ. ಇದರಿಂದ ಒಂದು ಬಸ್​​ನಲ್ಲಿ ಆರು ಜನ ರೋಗಿಗಳಿಗೆ ಆಕ್ಸಿಜನ್ ಚಿಕಿತ್ಸೆ ನೀಡಲಾಗುತ್ತದೆ ಎಂದು ಜೈನ್ ಇಂಟರ್​ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ತಿಳಿಸಿದೆ.

ಇದನ್ನೂ ಓದಿ..ಆಸ್ಪತ್ರೆಗಳಲ್ಲಿ ಆಕ್ಸಿಜನ್​​ ಆಡಿಟ್ ಕಡ್ಡಾಯ: ಹೈಕೋರ್ಟ್ ನಿರ್ದೇಶನದನಂತೆ ಹೊಸ ಮಾರ್ಗಸೂಚಿ

ABOUT THE AUTHOR

...view details