ಹುಬ್ಬಳ್ಳಿ: ಯಾರನ್ನ ಮಂತ್ರಿ ಮಾಡಬೇಕು, ಯಾರನ್ನ ಬಿಡಬೇಕು ಅನ್ನೋ ವಿಚಾರ ಸಿಎಂ ಯಡಿಯೂರಪ್ಪನವರ ವಿವೇಚನೆಗೆ ಬಿಟ್ಟಿದ್ದು ಅಂತಾ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಸಂಪುಟ ವಿಸ್ತರಣೆ ಮಾಡೋದು ಕಷ್ಟವಿರುತ್ತೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಯಾರನ್ನ ಮಂತ್ರಿ ಮಾಡಬೇಕು, ಯಾರನ್ನ ಬಿಡಬೇಕು ಅನ್ನೋ ವಿಚಾರ ಸಿಎಂ ಯಡಿಯೂರಪ್ಪನವರ ವಿವೇಚನೆಗೆ ಬಿಟ್ಟಿದ್ದು ಅಂತಾ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ನಗರದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ಕೊಟ್ಟ ಬಳಿಕ ಮಾತನಾಡಿದ ಅವರು, ಸಚಿವ ಸ್ಥಾನಕ್ಕೆ ಬೇಡಿಕೆ ಸಲ್ಲಿಸಬಹುದು ಮತ್ತು ಸಲಹೆ ನೀಡಬಹುದು. ಸಚಿವರನ್ನಾಗಿ ಮಾಡುವುದು ಸಿಎಂ ಪರಮಾಧಿಕಾರ ಎಂದರು. ಸಿಎಂ ನನ್ನನ್ನು ಮಂತ್ರಿ ಮಾಡಲಿಲ್ಲ ಎಂದು ಬಹಳಷ್ಟು ಜನರು ಆರೋಪಿಸುತ್ತಾರೆ. ಆದ್ರೆ ಸಿಎಂ ಸ್ಥಾನ ನಿಭಾಯಿಸೋದು ಕಷ್ಟವಿರುತ್ತೆ. ಜೊತೆಗೆ ಸಚಿವ ಸಂಪುಟ ವಿಸ್ತರಣೆ ಮಾಡೋದು ಅಷ್ಟು ಸುಲಭವಲ್ಲ. ಅದು ಸಿಎಂ ಆದವರಿಗೆ ಮಾತ್ರ ಅರಿವಿರುತ್ತೆ ಎಂದರು.
ಹುಬ್ಬಳ್ಳಿಗೆ ಕೇಂದ್ರ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆ, ಕಾಂಗ್ರೆಸ್ ಹಮ್ಮಿಕೊಂಡಿರುವ ಗೋಬ್ಯಾಕ್ ಅಮಿತ್ ಶಾ ಹೇಳಿಕೆಗೆ ತೀರಗೇಟು ನೀಡಿದ ಜೋಶಿ, ಕಾಂಗ್ರೆಸ್ಗೆ ಜನರು ಈಗಾಗಲೇ ಗೋಬ್ಯಾಕ್ ಅಂತಾ ಹೇಳಿದ್ದಾರೆ.
ವಿರೋಧ ಪಕ್ಷವಾಗಿ ಸರಿಯಾಗಿ ಹೋರಾಟ ಮಾಡುವ ಯೋಗ್ಯತೆಯಿಲ್ಲ. ರಚನಾತ್ಮಕವಾಗಿ ಹೋರಾಟ ಮಾಡುವುದು ಬಿಟ್ಟು ಗೋಬ್ಯಾಕ್ ಅನ್ನುವುದು ಸರಿಯಲ್ಲ. ಮೊದಲು ಪ್ರತಿಭಟನೆ ಯಾವುದಕ್ಕೆ ಮಾಡಬೇಕು ಅನ್ನೋದನ್ನ ಕಲಿಯಲಿ ಎಂದು ವಿಪಕ್ಷಗಳ ವಿರುದ್ಧ ಕುಟುಕಿದರು.